Publish Date: Mon, 29 Nov 2021 (20:27 IST)
Updated Date: Mon, 29 Nov 2021 (20:31 IST)
ಮುಂಬೈ: ಟೀಂ ಇಂಡಿಯಾ ವೇಗಿ ಶ್ರಾದ್ಧೂಲ್ ಠಾಕೂರ್ ಇಂದು ತಮ್ಮ ಬಹುಕಾಲದ ಗೆಳತಿ ಮಿಥಾಲಿ ಪಾರುಲ್ಕರ್ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಈ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಸಹ ಕ್ರಿಕೆಟಿಗರಾದ ರೋಹಿತ್ ಶರ್ಮಾ, ಅಭಿಷೇಕ್ ನಾಯರ್ ಧವಲ್ ಕುಲಕರ್ಣಿ ಸೇರಿದಂತೆ ಆಪ್ತರು ಭಾಗಿಯಾಗಿದ್ದಾರೆ.
ಮಿಥಾಲಿ ಸ್ಟಾರ್ಪ್ ಕಂಪನಿಯೊಂದರ ಮಾಲಕಿಯಾಗಿದ್ದು, ಕಳೆದ ಕೆಲವು ಸಮಯದಿಂದ ಶ್ರಾದ್ಧೂಲ್ ಜೊತೆಗೆ ಪ್ರೇಮ ಸಂಬಂಧ ಹೊಂದಿದ್ದಾರೆ. ಇದೀಗ ಇಬ್ಬರೂ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದು, ರೋಹಿತ್ ಶರ್ಮಾ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರಿದ್ದಾರೆ.