Publish Date: Mon, 29 Nov 2021 (17:05 IST)
Updated Date: Mon, 29 Nov 2021 (17:07 IST)
ಕಾನ್ಪುರ: ಮಹತ್ವದ ಪಂದ್ಯಗಳಲ್ಲಿ ಟೀಂ ಇಂಡಿಯಾಗೆ ಕೈಕೊಡುವುದು ಹವಾಮಾನ. ಇತ್ತೀಚೆಗಿನ ದಿನಗಳಲ್ಲಿ ಹಲವು ಬಾರಿ ಮಳೆ, ಮಂದಬೆಳಕು ಭಾರತಕ್ಕೆ ಶಾಪವಾಗಿದೆ. ಇಂದಿನ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲೂ ಅದೇ ಆಗಿದೆ.
ಟೆಸ್ಟ್ ಪಂದ್ಯದ ಮೊದಲ ದಿನದಿಂದಲೂ ಸಂಪೂರ್ಣ ಓವರ್ ಆಟ ಸಾಧ್ಯವಾಗಿಲ್ಲ. ಮಂದ ಬೆಳಕಿನಿಂದಾಗಿ ಪ್ರತಿದಿನನೂ 5-6 ಓವರ್ ಗಳಷ್ಟು ಬೇಗನೇ ದಿನದಾಟ ಮುಕ್ತಾಯಗೊಳಿಸಲಾಗುತ್ತಿತ್ತು.
ಇಂದಿನ ದಿನವೂ ಅದೇ ಆಗಿದೆ. ಭಾರತದ ಗೆಲುವಿಗೆ ಇನ್ನು ಒಂದು ವಿಕೆಟ್ ಬೇಕಿತ್ತು. 4.34 ಕ್ಕೆ ದಿನದಾಟ ಅಂತ್ಯವಾಗುತ್ತಿತ್ತು. ಆದರೆ ಮಂದ ಬೆಳಕಿನಿಂದಾಗಿ 4.22 ಕ್ಕೇ ದಿನದಾಟ ಮುಗಿಸಬೇಕಾಗಿ ಬಂತು. ಅಂಪಾಯರ್ ಗಳ ಜೊತೆ ಎರಡೂ ತಂಡದ ನಾಯಕರು ಚರ್ಚಿಸಿ ಕೊನೆಗೆ ಡ್ರಾ ಮಾಡಿಕೊಳ್ಳಲು ನಿರ್ಧರಿಸಿದರು. ಹೀಗಾಗಿ ಈ ಪಂದ್ಯದಲ್ಲಿ ಗೆಲ್ಲಬೇಕಾಗಿದ್ದ ಟೀಂ ಇಂಡಿಯಾಗೆ ಮಂದಬೆಳಕು ವಿಲನ್ ಆಯಿತು.