ಕಾನ್ಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ಬ್ಯಾಟರ್ ಗಳ ಜಿಗುಟು ಆಟಕ್ಕೆ ಟೀಂ ಇಂಡಿಯಾ ಬೌಲರ್ ಗಳು ಬೆಂಡಾಗಿದ್ದಾರೆ.
ಗೆಲುವಿಗೆ 284 ರನ್ ಗಳ ಗುರಿ ಬೆನ್ನತ್ತಿರುವ ನ್ಯೂಜಿಲೆಂಡ್ ಇಂದು ಇತ್ತೀಚೆಗಿನ ವರದಿ ಬಂದಾಗ 1 ವಿಕೆಟ್ ನಷ್ಟಕ್ಕೆ 61 ರನ್ ಗಳಿಸಿದೆ. ಇಂದಿನ ದಿನದಾಟದಲ್ಲಿ ಇದುವರೆಗೆ ವಿಕೆಟ್ ನಷ್ಟವಿಲ್ಲದೇ ಬ್ಯಾಟಿಂಗ್ ನಡೆಸುತ್ತಿರುವುದು ವಿಶೇಷ.
ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿರುವ ನ್ಯೂಜಿಲೆಂಡ್ ಅತ್ತ ರನ್ ಗಳಿಸದೇ ಇತ್ತ ವಿಕೆಟ್ ಕಳೆದುಕೊಳ್ಳದೇ ಟೀಂ ಇಂಡಿಯಾ ಬೌಲರ್ ಗಳ ಬೆವರಿಳಿಸುತ್ತಿದ್ದಾರೆ. ಇತ್ತೀಚೆಗಿನ ವರದಿ ಬಂದಾಗ ವಿಲಿಯಮ್ ಸೋಮವರ್ ವಿಲ್ಲೆ 27 ಮತ್ತು ಟಾಮ್ ಲಾಥಮ್ 28 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.