ಮುಂಬೈ: 2022 ರ ಐಪಿಎಲ್ ಗೆ ಮೊದಲು ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಫ‍್ರಾಂಚೈಸಿಗಳು ಈಗಾಗಲೇ ತೀರ್ಮಾನ ಕೈಗೊಂಡಿದೆ.
ಉಳಿಸಿಕೊಳ್ಳುವ ಮತ್ತು ಹರಾಜಿಗೆ ಬಿಡುವ ಆಟಗಾರರ ಅಂತಿಮ ಪಟ್ಟಿಯನ್ನು ನೀಡಲು ಎಲ್ಲಾ ಫ್ರಾಂಚೈಸಿಗಳಿಗೆ ನವಂಬರ್ 30 ಕೊನೆಯ ದಿನವಾಗಿದೆ. ಈ ದಿನದೊಳಗಾಗಿ ಎಲ್ಲಾ ತಂಡಗಳು ತಮ್ಮ ಆಟಗಾರರ ಲಿಸ್ಟ್ ಒದಗಿಸಬೇಕು.
ಹೊಸದಾಗಿ ಹುಟ್ಟಿಕೊಂಡಿರುವ ಎರಡು ತಂಡಗಳಿಗೆ ಹರಾಜಿಗೆ ಮೊದಲು ಮೂವರು ಆಟಗಾರರನ್ನು ನೇರವಾಗಿ ಖರೀದಿಸಲು ಅವಕಾಶವಿದೆ. ಜನವರಿ ಮೊದಲ ವಾರದಲ್ಲಿ ಹರಾಜು ಪ್ರಕ್ರಿಯೆ ನಡೆಯುವ ನಿರೀಕ್ಷೆಯಿದೆ.