Publish Date: Sun, 28 Nov 2021 (11:30 IST)
Updated Date: Sun, 28 Nov 2021 (09:31 IST)
ಮುಂಬೈ: ಐಪಿಎಲ್ 2022 ಕ್ಕೂ ಮೊದಲು ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, ಘಟಾನುಘಟಿ ಆಟಗಾರರು ಹರಾಜಿಗೊಳಪಡಲಿದ್ದಾರೆ.
ಅದರಲ್ಲಿ ಪ್ರಮುಖವಾಗಿ ಕೆಲವು ಹೆಸರುಗಳು ಕೇಳಿಬರುತ್ತಿವೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳೂ ತಾವು ಉಳಿಸಿಕೊಳ್ಳಬೇಕಾದ ನಾಲ್ವರು ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದೆ ಎನ್ನಲಾಗಿದೆ.ಹೀಗಾಗಿ ಹೊರ ಹೋಗಲಿರುವ ಆಟಗಾರರು ಯಾರು ಎಂಬ ಸಂಭಾವ್ಯರ ಲಿಸ್ಟ್ ಇಲ್ಲಿದೆ ನೋಡಿ.
ಕೆಎಲ್ ರಾಹುಲ್, ಶಿಖರ್ ಧವನ್, ಶ್ರೇಯಸ್ ಐಯರ್, ಡೇವಿಡ್ ವಾರ್ನರ್, ಹರ್ಷಲ್ ಪಟೇಲ್, ಫಾ ಡು ಪ್ಲೆಸಿಸ್, ಶ್ರಾದ್ಧೂಲ್ ಠಾಕೂರ್, ಸೂರ್ಯಕುಮಾರ್ ಯಾದವ್, ಕಗಿಸೊ ರಬಾಡ, ದೇವದತ್ತ್ ಪಡಿಕ್ಕಲ್ ರಂತಹ ಘಟಾನುಘಟಿಗಳು ಈ ಬಾರಿ ಹರಾಜಿಗೊಳಗಾಗುವ ಸಾಧ್ಯತೆಯಿದೆ.