Select Your Language

Notifications

webdunia
webdunia
webdunia
webdunia

ಒಂದೇ ದಿನ ಪಾಕಿಸ್ತಾನಿಯರ ಎರಡು ದಾಖಲೆ ಮುರಿದ ಆರ್ ಅಶ್ವಿನ್

ಒಂದೇ ದಿನ ಪಾಕಿಸ್ತಾನಿಯರ ಎರಡು ದಾಖಲೆ ಮುರಿದ ಆರ್ ಅಶ್ವಿನ್
ಕಾನ್ಪುರ , ಶನಿವಾರ, 27 ನವೆಂಬರ್ 2021 (16:48 IST)
Photo Courtesy: Google
ಕಾನ್ಪುರ: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನ ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇಂದು ಪಾಕಿಸ್ತಾನ ಆಟಗಾರರ ಎರಡು ದಾಖಲೆಗಳನ್ನು ಮುರಿದಿದ್ದಾರೆ.

ನ್ಯೂಜಿಲೆಂಡ್ ಆರಂಭಿಕ ವಿಲ್ ಯುಂಗ್ ವಿಕೆಟ್ ಪಡೆದ ಅಶ್ವಿನ್ ಈ ಮೂಲಕ 2021 ರ ಋತುವಿನಲ್ಲಿ ಗರಿಷ್ಠ ಟೆಸ್ಟ್ ವಿಕೆಟ್ ಪಡೆದ ದಾಖಲೆ ಮಾಡಿದದರು. ಈ ವರ್ಷ ಅಶ್ವಿನ್ 41 ವಿಕೆಟ್ ಸಂಪಾದಿಸಿದ್ದಾರೆ. ಈ ಮೂಲಕ ಪಾಕ್ ಬೌಲರ್ ಶಾಹಿನ್ ಅಫ್ರಿದಿ ದಾಖಲೆ ಹಿಂದಿಕ್ಕಿದ್ದಾರೆ.

ಇನ್ನು, ವೃತ್ತಿ ಜೀವನದ 415 ನೇ ವಿಕೆಟ್ ಪಡೆದ ಅಶ್ವಿನ್ ಟೆಸ್ಟ್  ಕ್ರಿಕೆಟ್ ನಲ್ಲಿ ವಿಕೆಟ್ ಗಳಿಕೆ ಪಟ್ಟಿಯಲ್ಲಿ ಪಾಕ್ ಮಾಜಿ ವೇಗಿ ವಾಸಿಂ ಅಕ್ರಂ ಅವರನ್ನು ಹಿಂದಿಕ್ಕಿದ್ದಾರೆ. ಅಕ್ರಂ 414 ವಿಕೆಟ್ ಪಡೆದಿದ್ದರು. ಅಶ್ವಿನ್ ಇನ್ನೂ ಒಂದು ವಿಕೆಟ್ ಸಂಪಾದಿಸಿದರೆ ಹರ್ಭಜನ್ ದಾಖಲೆಯನ್ನು ಹಿಂದಿಕ್ಕಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾನ್ಪುರ ಟೆಸ್ಟ್: ಸ್ಪಿನ್ನರ್ ಗಳಿಂದ ಪಂದ್ಯ ಟೀಂ ಇಂಡಿಯಾ ಹಿಡಿತದಲ್ಲಿ