Publish Date: Sat, 27 Nov 2021 (10:00 IST)
Updated Date: Sat, 27 Nov 2021 (10:09 IST)
ಮುಂಬೈ: ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್ ಸೇರಿದಂತೆ ಘಟಾನುಘಟಿಗಳ ಪುನರಾಗಮನವಾಗಲಿದೆ.
ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ಸರಣಿಗೆ ಟೀಂ ಇಂಡಿಯಾ ನಾಯಕರಾಗಿ ಕೊಹ್ಲಿ ವಾಪಸ್ ಆಗಲಿದ್ದು, ಬಹುಕಾಲದಿಂದ ತಂಡದಲ್ಲಿ ಅವಕಾಶ ಸಿಗದ ಶಿಖರ್ ಧವನ್ ಗೂ ಅವಕಾಶ ಸಿಗಲಿದೆ. ರೋಹಿತ್ ಶರ್ಮಾ ಕೂಡಾ ವಿಶ್ರಾಂತಿ ಮುಗಿಸಿ ತಂಡಕ್ಕೆ ವಾಪಸ್ ಆಗಲಿದ್ದಾರೆ.
ಆದರೆ ಕೊರೋನಾ ಭೀತಿಯಿಂದಾಗಿ ದಕ್ಷಿಣಾ ಆಪ್ರಿಕಾ ಪ್ರವಾಸವೇ ಅನಿಶ್ಚಿತತೆಯಲ್ಲಿದೆ. ಎಲ್ಲಾ ಸರಿ ಹೋದರೆ ಡಿಸೆಂಬರ್ 8 ರಂದು ಟೀಂ ಇಂಡಿಯಾ ಆಫ್ರಿಕಾ ನಾಡಿಗೆ ಪ್ರಯಾಣ ಬೆಳೆಸಲಿದೆ.