Select Your Language

Notifications

webdunia
webdunia
webdunia
webdunia

ಕಾನ್ಪುರ ಟೆಸ್ಟ್: ಟೀಂ ಇಂಡಿಯಾಗೆ ಕಿವೀಸ್ ತಿರುಗೇಟು

ಕಾನ್ಪುರ ಟೆಸ್ಟ್: ಟೀಂ ಇಂಡಿಯಾಗೆ ಕಿವೀಸ್ ತಿರುಗೇಟು
ಕಾನ್ಪುರ , ಶುಕ್ರವಾರ, 26 ನವೆಂಬರ್ 2021 (14:01 IST)
ಕಾನ್ಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ನ್ಯೂಜಿಲೆಂಡ್ ದಿಟ್ಟ ಪ್ರತ್ಯುತ್ತರ ನೀಡಿದೆ.

ಮೊದಲ ಇನಿಂಗ್ಸ್ ನಲ್ಲಿ ಭಾರತ 345 ರನ್ ಗಳಿಗೆ ಆಲೌಟ್ ಆಗಿತ್ತು. ಎರಡನೇ ಸರದಿಯಲ್ಲಿ ಬ್ಯಾಟಿಂಗ್ ಕಷ್ಟವಾಗಿರುವುದರಿಂದ ಕಿವೀಸ್ ಗೆ ಈ ಮೊತ್ತ ಬೆನ್ನತ್ತುವುದು ಕಷ್ಟವಾಗಬಹುದು ಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು.

ಆದರೆ ಇತ್ತೀಚೆಗಿನ ವರದಿ ಬಂದಾಗ ಕಿವೀಸ್ ವಿಕೆಟ್ ನಷ್ಟವಿಲ್ಲದೇ 55 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದೆ. ವಿಲ್ ಯಂಗ್ 34 ಮತ್ತು ಟಾಮ್ ಲಾಥಮ್ 18 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ವೇಗಿಗಳು ರನ್ ಹೆಚ್ಚು ಬಿಟ್ಟುಕೊಡದೇ ಇದ್ದರೂ ವಿಕೆಟ್ ಕೀಳಲು ಸಾಧ್ಯವಾಗಿಲ್ಲ. ಇದೀಗ ಸ್ಪಿನ್ ಜೋಡಿಗಳಾದ ಅಶ್ವಿನ್-ಜಡೇಜಾ ವಿಕೆಟ್ ಕೀಳಲು ಪ್ರಯಾಸಪಡುತ್ತಿದ್ದಾರೆ. ನ್ಯೂಜಿಲೆಂಡ್ ಇದೀಗ 290 ರನ್ ಗಳ ಹಿನ್ನಡೆಯಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೆಸ್ಟ್‌ನಲ್ಲಿಯೇಶತಕ ದಾಖಲೆ ಮಾಡಿದ ಅಯ್ಯರ್!