Photo Courtesy: Instagram
ಬೆಂಗಳೂರು: ಕರ್ನಾಟಕ ಕ್ರಿಕೆಟಿಗ, ಐಪಿಎಲ್ ನ ರಾಜಸ್ಥಾನ್ ರಾಯಲ್ಸ್ ತಂಡದ ಆಲ್ ರೌಂಡರ್ ಶ್ರೇಯಸ್ ಗೋಪಾಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಗೆಳತಿ ನಿಖಿತಾ ಶಿವ ಅವರೊಂದಿಗೆ ಶ್ರೇಯಸ್ ಸಪ್ತಪದಿ ತುಳಿದಿದ್ದಾರೆ. ತೀರಾ ಆಪ್ತರ ಸಮ್ಮುಖದಲ್ಲಿ ವಿವಾಹ ಕಾರ್ಯಕ್ರಮ ನಡೆದಿದ್ದು, ಬಳಿಕ ಶ್ರೇಯಸ್ ಇನ್ ಸ್ಟಾಗ್ರಾಂ ಮೂಲಕ ಮದುವೆ ವಿಚಾರ ಬಹಿರಂಗಪಡಿಸಿದ್ದಾರೆ.
ಕಳೆದ ಕೆಲವು ತಿಂಗಳ ಹಿಂದೆ ಇಬ್ಬರೂ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಶ್ರೇಯಸ್ ಐಪಿಎಲ್ ಪಂದ್ಯಾವಳಿಗಳು ಮತ್ತು ಕೊರೋನಾ ನಿಯಮಾವಳಿಗಳಿಂದ ಮದುವೆ ಮುಂದೂಡಿಕೆಯಾಗಿತ್ತು.