Publish Date: Fri, 26 Nov 2021 (08:50 IST)
Updated Date: Fri, 26 Nov 2021 (09:05 IST)
ಕಾನ್ಪುರ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಶ್ರೇಯಸ್ ಐಯರ್ ತಮ್ಮ ತಂದೆಯ ಬಹುಕಾಲದ ಕನಸು ನನಸು ಮಾಡಿದ್ದಾರೆ.
ಶ್ರೇಯಸ್ ತಂದೆ ಸಂತೋಷ್ ಐಯರ್ ಗೆ ತಮ್ಮ ಪುತ್ರ ಟೆಸ್ಟ್ ಕ್ರಿಕೆಟ್ ಆಡಬೇಕೆಂದು ಕನಸಿತ್ತಂತೆ. 2017 ರಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿ ಪಂದ್ಯದಲ್ಲಿ ಶ್ರೇಯಸ್, ವಿರಾಟ್ ಕೊಹ್ಲಿಗೆ ಸ್ಟ್ಯಾಂಡ್ ಬೈ ಆಟಗಾರನಾಗಿದ್ದರು. ಆ ವೇಳೆ ಸರಣಿ ಬಳಿಕ ಟೀಂ ಇಂಡಿಯಾ ನಾಯಕ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಯುವ ಆಟಗಾರನಾಗಿದ್ದ ಶ್ರೇಯಸ್ ಗೆ ಒಮ್ಮೆ ಹಿಡಿದುಕೊಳ್ಳಲು ಕೊಟ್ಟಿದ್ದರಂತೆ.
ಆ ಫೋಟೋವನ್ನೇ ಸಂತೋಷ್ ತಮ್ಮ ವ್ಯಾಟ್ಸಪ್ ಪ್ರೊಫೈಲ್ ಫೋಟೋವಾಗಿ ಇದುವರೆಗೂ ಇಟ್ಟುಕೊಂಡಿದ್ದರಂತೆ. ಅದಕ್ಕೆ ಕಾರಣ, ತಮ್ಮ ಪುತ್ರ ಟೆಸ್ಟ್ ಕ್ರಿಕೆಟ್ ಆಡುವುದನ್ನು ಕಣ್ಣಾರೆ ನೋಡಬೇಕು ಎಂಬುದಾಗಿತ್ತು. ನಿನ್ನೆ ರೆಹಾನೆ ಈ ಪಂದ್ಯದಲ್ಲಿ ಶ್ರೇಯಸ್ ಟೆಸ್ಟ್ ಕ್ರಿಕೆಟ್ ಗೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿ ಪ್ರಕಟಿಸಿದಾಗ ಸಂತೋಷ್ ಎಲ್ಲರಿಗಿಂತ ಹೆಚ್ಚು ಖುಷಿಪಟ್ಟಿದ್ದಾರಂತೆ.