Publish Date: Fri, 26 Nov 2021 (10:14 IST)
Updated Date: Fri, 26 Nov 2021 (10:16 IST)
ಕಾನ್ಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಶ್ರೇಯಸ್ ಐಯರ್ ಶತಕ ಸಿಡಿಸಿದ್ದಾರೆ.
ಇದು ಶ್ರೇಯಸ್ ಪಾಲಿನ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ. ಪಾದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ಅಪರೂಪದ ಆಟಗಾರರ ಸಾಲಿಗೆ ಶ್ರೇಯಸ್ ಸೇರಿಕೊಂಡಿದ್ದಾರೆ. ಭಾರತದ ಪರ ಪಾದಾರ್ಪಣೆ ಮಾಡಿದ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ 16 ನೇ ಆಟಗಾರ ಶ್ರೇಯಸ್. ಇದೀಗ ಅವರು 104 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ನಿನ್ನೆ 50 ರನ್ ಗಳಿಸಿ ಅಜೇಯರಾಗುಳಿದಿದ್ದ ರವೀಂದ್ರ ಜಡೇಜಾ ಇಂದು ರನ್ ಗಳಿಸದೇ ಔಟಾದರು. ಇವರ ಹಿಂದೇ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಕೇವಲ 1 ರನ್ ಗೆ ಔಟಾದರು. ಇದೀಗ ಭಾರತ 6 ವಿಕೆಟ್ ನಷ್ಟಕ್ಕೆ 290 ರನ್ ಗಳಿಸಿದೆ.