Select Your Language

Notifications

webdunia
webdunia
webdunia
webdunia

ಟೆನಿಸ್ ಪಂದ್ಯದ ನಡುವೆ ಪದೇ ಪದೇ ಶೌಚಾಲಯಕ್ಕೆ ಹೋಗುವಂತಿಲ್ಲ!

ಟೆನಿಸ್ ಪಂದ್ಯದ ನಡುವೆ ಪದೇ ಪದೇ ಶೌಚಾಲಯಕ್ಕೆ ಹೋಗುವಂತಿಲ್ಲ!
ನವದೆಹಲಿ , ಶುಕ್ರವಾರ, 26 ನವೆಂಬರ್ 2021 (10:06 IST)
ನವದೆಹಲಿ: ಅಂತಾರಾಷ್ಟ್ರೀಯ ಟೆನಿಸ್ ಪಂದ್ಯದ ನಡುವೆ ಪದೇ ಪದೇ ಶೌಚಾಲಯಕ್ಕೆ ಹೋಗಿ ಪಂದ್ಯ ವಿಳಂಬ ಮಾಡುವ ಆಟಗಾರರ ಖಯಾಲಿಗೆ ಇನ್ನು ಕತ್ತರಿ ಬೀಳಲಿದೆ.

ಎಟಿಪಿ ಅಂತಹದ್ದೊಂದು ಕಠಿಣ ನಿಯಮವನ್ನು ಜಾರಿಗೆ ತಂದಿದೆ. ಇಷ್ಟು ದಿನ ಪಂದ್ಯದ ನಡುವೆ ಆಟಗಾರ ಎಷ್ಟು ಹೊತ್ತು ಬೇಕಾದರೂ ಶೌಚಾಲಯಕ್ಕೆ ಹೋಗಲು ಬ್ರೇಕ್ ತೆಗೆದುಕೊಳ್ಳಬಹುದಿತ್ತು ಮತ್ತು ವೈದ್ಯಕೀಯ ವಿಶ್ರಾಂತಿ ಪಡೆಯಬಹುದಿತ್ತು.

ಆದರೆ ಸೋಲುವ ಹಂತದಲ್ಲಿ ಕೆಲವು ಆಟಗಾರರು ಎದುರಾಳಿಯ ಲಯ ಕೆಡಿಸಲು ಈ ನಿಯಮಗಳ ದುರ್ಬಳಕೆ ಮಾಡುತ್ತಾರೆ ಎಂಬ ಆರೋಪಗಳಿತ್ತು. ಈ ಹಿನ್ನಲೆಯಲ್ಲಿ ಇದೀಗ ಎಟಿಪಿ ಹೊಸ ನಿಯಮಾಳಿಯನ್ನು ಜಾರಿಗೆ ತಂದಿದ್ದು, ಇನ್ನು ಮುಂದೆ ಪಂದ್ಯದ ನಡುವೆ ಒಂದು ಬಾರಿ ಮಾತ್ರ ಕೇವಲ 3 ನಿಮಿಷ ಕಾಲಾವಧಿ ಶೌಚಾಲಯ ಬ್ರೇಕ್ ತೆಗೆದುಕೊಳ್ಳಬಹುದು. ವೈದ್ಯಕೀಯ ವಿಶ್ರಾಂತಿಗೂ ಕೇವಲ ಮೂರು ನಿಮಿಷದ ಅವಧಿ ನೀಡಲಾಗಿದೆ. ಇದಕ್ಕೆ ಆಟಗಾರರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ಕೆಎಲ್ ರಾಹುಲ್ ನಡೆ ಲಕ್ನೋ ಕಡೆಗಾ? ತವರಿನ ಕಡೆಗಾ?