Publish Date: Fri, 26 Nov 2021 (16:47 IST)
Updated Date: Fri, 26 Nov 2021 (16:49 IST)
ಕಾನ್ಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ನ್ಯೂಜಿಲೆಂಡ್ ಎರಡನೇ ದಿನದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 129 ರನ್ ಗಳಿಸಿದೆ.
ಭಾರತ ಮೊದಲ ಇನಿಂಗ್ಸ್ ನಲ್ಲಿ 345 ರನ್ ಗೆ ಆಲೌಟ್ ಆಗಿತ್ತು. ಈ ಮೊತ್ತವನ್ನು ಬೆನ್ನತ್ತಿರುವ ಕಿವೀಸ್ ಇದುವರೆಗೆ ಅದ್ಭುತ ಬ್ಯಾಟಿಂಗ್ ನಡೆಸಿದೆ. ಆರಂಭಿಕ ಯುಂಗ್ 75 ಮತ್ತು ಲಾಥಮ್ 50 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಈ ಮೂಲಕ ನ್ಯೂಜಿಲೆಂಡ್ ಬ್ಯಾಟ್ಸ್ ಮನ್ ಗಳು ಇದೇ ಮೊದಲ ಬಾರಿಗೆ ಭಾರತೀಯ ನೆಲದಲ್ಲಿ ಆರಂಭಿಕ ವಿಕೆಟ್ ಗೆ ಗರಿಷ್ಠ ರನ್ ಜೊತೆಯಾಟವಾಡಿದ್ದಾರೆ.
ಸಾಮಾನ್ಯವಾಗಿ ಯಾವುದೇ ಪ್ರವಾಸೀ ತಂಡವೂ ಭಾರತೀಯ ನೆಲದಲ್ಲಿ ಸ್ಪಿನ್ನರ್ ಗಳನ್ನು ಎದುರಿಸಲು ಪರದಾಡುತ್ತಾರೆ. ಆದರೆ ಕಿವೀಸ್ ಬ್ಯಾಟ್ಸ್ ಮನ್ ಗಳು ಸ್ಪಿನ್ನರ್ ಗಳ ದಾಳಿಗೂ ಕ್ಯಾರೇ ಎಂದಿಲ್ಲ. ಇದ್ದವರಲ್ಲಿ ರವಿಚಂದ್ರನ್ ಅಶ್ವಿನ್ ವಾಸಿ. ಆದರೆ ಅವರಿಂದಲೂ ವಿಕೆಟ್ ಕೀಳಲು ಸಾಧ್ಯವಾಗಿಲ್ಲ. ಇದೀಗ ಕಿವೀಸ್ ಭಾರತದ ಮೊದಲ ಇನಿಂಗ್ಸ್ ಮುನ್ನಡೆ ದಾಟಲು 216 ರನ್ ಗಳಿಸಿದರೆ ಸಾಕು.