Publish Date: Sat, 27 Nov 2021 (08:40 IST)
Updated Date: Sat, 27 Nov 2021 (08:59 IST)
ಮುಂಬೈ: ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಬೇಕಿತ್ತು. ಆದರೆ ಇದೀಗ ಈ ಸರಣಿ ಮೇಲೆ ಕೊರೋನಾ ಭೀತಿ ಆವರಿಸಿದೆ.
ಡಿಸೆಂಬರ್ 8 ರಂದು ಟೀಂ ಇಂಡಿಯಾ ಆಫ್ರಿಕಾಗೆ ಪ್ರಯಾಣ ಬೆಳೆಸಬೇಕಿದೆ. ಆದರೆ ಇದೀಗ ಹೊಸ ತಳಿಯ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಭಾರತ ತಂಡದ ಪ್ರವಾಸದ ಮೇಲೆ ಅನಿಶ್ಚಿತತೆಯ ಕಾರ್ಮೋಡ ಕವಿದಿದೆ.
ಹೀಗಾಗಿ ಬಿಸಿಸಿಐ ಟೀಂ ಇಂಡಿಯಾ ಪ್ರವಾಸ ತೆರಳಲು ಸರ್ಕಾರದ ಒಪ್ಪಿಗೆಗಾಗಿ ಕಾಯುತ್ತಿದೆ. ಟೀಂ ಇಂಡಿಯಾ ಟೆಸ್ಟ್ ಆಡಬೇಕಿರುವ ಜೊಹಾನ್ಸ್ ಬರ್ಗ್, ಪ್ರಿಟೋರಿಯಾಗಳಲ್ಲಿ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.