Publish Date: Sun, 28 Nov 2021 (08:45 IST)
Updated Date: Sun, 28 Nov 2021 (08:57 IST)
ಕಾನ್ಪುರ: ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ ಟೀಂ ಇಂಡಿಯಾ ಸ್ಪಿನ್ನರ್ ಅಕ್ಸರ್ ಪಟೇಲ್ ತಮ್ಮ ಸಹ ಕ್ರಿಕೆಟಿಗರು ತಮ್ಮನ್ನು ಟೀಸ್ ಮಾಡುತ್ತಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಅಕ್ಸರ್ ಪಟೇಲ್ ಕಳೆದ ಏಳು ಇನಿಂಗ್ಸ್ ಗಳಿಂದ ಐದು ಬಾರಿ ಐದು ವಿಕೆಟ್ ಕಬಳಿಸಿದ್ದಾರೆ. ಇದು ನಿಜಕ್ಕೂ ಶ್ರೇಷ್ಠ ಸಾಧನೆಯೇ. ಯಾವುದೇ ಕ್ರಿಕೆಟಿಗನಿಗೂ ಇದು ಕನಸಿನ ಆರಂಭ. ಹಾಗಿದ್ದರೂ ಸಹ ಕ್ರಿಕೆಟಿಗರು ಅವರನ್ನು ಕಾಲೆಳೆಯುತ್ತಿದ್ದಾರಂತೆ.
ಅಕ್ಸರ್ ಇದೇ ಸಾಧನೆಯನ್ನೇ ಮುಂದಿಟ್ಟುಕೊಂಡು ಸಹ ಕ್ರಿಕೆಟಿಗರು ಅವರನ್ನು ಟೀಸ್ ಮಾಡುತ್ತಿದ್ದಾರಂತೆ. ಹಾಗಿದ್ದರೂ ಇದು ನನ್ನ ಕನಸಿನ ಆರಂಭ ಎಂದಿದ್ದಾರೆ.