Publish Date: Sun, 28 Nov 2021 (09:00 IST)
Updated Date: Sun, 28 Nov 2021 (09:08 IST)
ಬೆಂಗಳೂರು: ಮುಂಬರುವ ಐಪಿಎಲ್ ಗೆ ಮೊದಲು ಮೆಗಾ ಹರಾಜು ನಡೆಯಲಿದ್ದು, ಎಲ್ಲಾ ಫ್ರಾಂಚೈಸಿಗಳು ನಾಲ್ವರು ಆಟಗಾರರನ್ನು ತಮ್ಮಲ್ಲೇ ಉಳಿಸಿಕೊಳ್ಳಬಹುದಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಚಾರಕ್ಕೆ ಬಂದರೆ ಪ್ರಮುಖ ಆಟಗಾರರಾಗಿದ್ದ ಎಬಿಡಿ ವಿಲಿಯರ್ಸ್ ತಂಡದಿಂದ ನಿವೃತ್ತರಾಗಿದ್ದಾರೆ. ಹೀಗಾಗಿ ಈಗ ಆರ್ ಸಿಬಿ ಉಳಿಸಿಕೊಳ್ಳಲಿರುವ ನಾಲ್ವರು ಆಟಗಾರರು ಯಾರು ಎಂಬ ಚರ್ಚೆ ಶುರುವಾಗಿದೆ.
ಮೂಲಗಳ ಪ್ರಕಾರ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ ವೆಲ್ ರನ್ನು ಮಾತ್ರ ತನ್ನಲ್ಲೇ ಉಳಿಸಿಕೊಳ್ಳಬಹುದು ಎನ್ನಲಾಗಿದೆ. ಹಾಗಿದ್ದಲ್ಲಿ ಓಪನರ್ ಸ್ಥಾನಕ್ಕೆ ಹೊಸ ಆಟಗಾರನನ್ನು ಖರೀದಿ ಮಾಡುವ ಸಾಧ್ಯತೆಯಿದೆ. ಒಂದು ವೇಳೆ ಕೆಎಲ್ ರಾಹುಲ್ ತಂಡಕ್ಕೆ ಪುನರಾಗಮನವಾದರೆ ನಾಯಕನ ಸ್ಥಾನದ ಜೊತೆಗೆ ಆರಂಭಿಕ ಸ್ಥಾನವೂ ಭರ್ತಿಯಾಗಲಿದೆ. ಹಾಗಿದ್ದಲ್ಲಿ ದೇವದತ್ತ್ ಪಡಿಕ್ಕಲ್, ಯಜುವೇಂದ್ರ ಚಾಹಲ್ ಮುಂತಾ ಪ್ರಮುಖ ಆಟಗಾರರನ್ನು ತಂಡದಿಂದ ಕೈ ಬಿಡಬಹುದು.