ಕಾನ್ಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲಲು ಎದುರಾಳಿಗೆ ಟೀಂ ಇಂಡಿಯಾ 284 ರನ್ ಗಳ ಗುರಿ ನೀಡಿದೆ.
ದ್ವಿತೀಯ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನಿಂಗ್ಸ್ ಮುನ್ನಡೆ ಸೇರಿ ಟೀಂ ಇಂಡಿಯಾ 284 ರನ್ ಗಳ ಗುರಿ ನಿಗದಿಪಡಿಸಿತು. ಮೊದಲ ಇನಿಂಗ್ಸ್ ನಲ್ಲಿ ಶತಕ ಗಳಿಸಿದ್ದ ಶ್ರೇಯಸ್ ಐಯರ್ ಮತ್ತೆ ಆಪತ್ಬಾಂಧವರಾಗಿ ಪರಿಣಮಿಸಿ 65 ರನ್ ಗಳಿಸಿದರು. ಆರ್ ಅಶ್ವಿನ್ 32 ರನ್ ಗಳಿಸಿದರೆ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ವೃದ್ಧಿಮಾನ್ ಸಹಾ ಮಹತ್ವದ ಅಜೇಯ 61 ರನ್ ಗಳಿಸಿ ತಂಡಕ್ಕೆ ಆಧಾರವಾದರು. ಇಂದು ಪಂದ್ಯದ ನಾಲ್ಕನೇ ದಿನವಾಗಿದ್ದು, 10 ಓವರ್ ಗಳ ಆಟ ಬಾಕಿಯಿದೆ. ಹೀಗಾಗಿ ಈ ಪಂದ್ಯಕ್ಕೆ ರೋಚಕ ಘಟ್ಟಕ್ಕೆ ತಲುಪಿದೆ.