ಮುಂಬೈ: ಐಪಿಎಲ್ 2022 ರ ಮೆಗಾ ಹರಾಜು ಪ್ರಕ್ರಿಯೆಗೆ ಮುನ್ನ ಎಲ್ಲಾ ಫ್ರಾಂಚೈಸಿಗಳು ಉಳಿಸಿಕೊಳ‍್ಳುವ ಆಟಗಾರರ ಲಿಸ್ಟ್ ರೆಡಿ ಮಾಡಿದೆ. ನಿಯಮಗಳ ಪ್ರಕಾರ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಹಾಗಿದ್ದರೆ ಉಳಿಸಿಕೊಳ್ಳುವ ಆಟಗಾರರಿಗೆ ನೀಡಬೇಕಾದ ವೇತನವೆಷ್ಟು ಗೊತ್ತಾ?
ನಾಲ್ವರು ಆಟಗಾರರನ್ನು ಉಳಿಸಿಕೊಳ್ಳುವುದಿದ್ದರೆ ಲೆಕ್ಕಾಚಾರ ಹೀಗಿರಲಿದೆ: ಉಳಿಸಿಕೊಳ್ಳುವ ಆಟಗಾರರಿಗೆ ಒಟ್ಟಾರೆ 42 ಕೋಟಿ ರೂ. ಖರ್ಚು ಮಾಡಬೇಕಾಗುತ್ತದೆ. ಈ ಪೈಕಿ ಮೊದಲ ಆಯ್ಕೆಯ ಆಟಗಾರನಿಗೆ 16 ಕೋಟಿ ರೂ. ವೇತನ ನೀಡಬೇಕು. ಎರಡನೇ ಆಯ್ಕೆ ಆಟಗಾರನಿಗೆ 12 ಕೋಟಿ ರೂ., ಮೂರನೇ ಆಯ್ಕೆಯ ಆಟಗಾರನಿಗೆ 8 ಕೋಟಿ ರೂ. ಮತ್ತು ನಾಲ್ಕನೇ ಆಟಗಾರನಿಗೆ 6 ಕೋಟಿ ರೂ. ವೇತನ ನೀಡಬೇಕು.
ಮೂವರು ಆಟಗಾರರಿದ್ದರೆ: ಮೂವರು ಆಟಗಾರರಿಗೆ ಒಟ್ಟು 33 ಕೋಟಿ ರೂ. ವ್ಯಯಿಸಬಹುದಾಗಿದೆ. ಈ ಪೈಕಿ ಮೊದಲ ಆಟಗಾರನಿಗೆ 15 ಕೋಟಿ, ಎರಡನೇ ಆಟಗಾರನಿಗೆ 11 ಕೋಟಿ, ಮೂರನೇ ಆಟಗಾರನಿಗೆ 7 ಕೋಟಿ ರೂ. ನೀಡಬೇಕು.
ಇಬ್ಬರು ಆಟಗಾರರಿದ್ದರೆ: ಇಬ್ಬರು ಆಟಗಾರರಿಗೆ 24 ಕೋಟಿ ರೂ. ಮೀಸಲಿಡಬಹುದು. ಈ ಪೈಕಿ ಮೊದಲ ಆಟಗಾರನಿಗೆ 14 ಕೋಟಿ, ಎರಡನೇ ಆಟಗಾರನಿಗೆ 10 ಕೋಟಿ ರೂ. ನೀಡಬಹುದು.
ಕೇವಲ ಒಬ್ಬ ಆಟಗಾರನಿದ್ದರೆ: ಕೇವಲ ಒಬ್ಬ ಆಟಗಾರರನ್ನು ಉಳಿಸುವುದಾದರೆ ಆತನಿಗೆ 14 ಕೋಟಿ ರೂ. ಸಂಭಾವನೆ ನೀಡಬೇಕಾಗುತ್ತದೆ.