ಕಾನ್ಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾ ದ್ವಿತೀಯ ಇನಿಂಗ್ಸ್ ನಲ್ಲಿ ಪ್ರಮುಖ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಗಿದೆ.
49 ರನ್ ಗಳ ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ದ್ವಿತೀಯ ಪಾಳಿ ಆರಂಭಿಸಿದ ಟೀಂ ಇಂಡಿಯಾ ಆರಂಭದಲ್ಲೇ ಶುಬ್ನಂ ಗಿಲ್ ವಿಕೆಟ್ಕ ಕಳೆದುಕೊಂಡಿತ್ತು. ಇಂದಿನ ದಿನದಾಟದಲ್ಲಿ ಮತ್ತೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿದೆ.
ಮಯಾಂಕ್ ಅಗರ್ವಾಲ್ 17, ಚೇತೇಶ್ವರ ಪೂಜಾರ 22 ಮತ್ತು ನಾಯಕ ಅಜಿಂಕ್ಯಾ ರೆಹಾನೆ 4 ರನ್ ಗೇ ಔಟಾಗಿದ್ದಾರೆ. ಇನ್ನು ಮೊದಲ ಇನಿಂಗ್ಸ್ ನ ಹೀರೋ ರವೀಂದ್ರ ಜಡೇಜಾ ಶೂನ್ಯಕ್ಕೇ ನಿರ್ಗಮಿಸಿದ್ದಾರೆ. ಇತ್ತೀಚೆಗಿನ ವರದಿ ಬಂದಾಗ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 51 ರನ್ ಗಳಿಸಿ ಸಂಕಷ್ಟದಲ್ಲಿದೆ. ಮೊದಲ ಇನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದ ಶ್ರೇಯಸ್ ಐಯರ್ 6 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತದ ಒಟ್ಟಾರೆ ಮುನ್ನಡೆ 100 ಕ್ಕೆ ತಲುಪಿದೆ.