Select Your Language

Notifications

webdunia
webdunia
webdunia
webdunia

ಕಾನ್ಪುರ ಟೆಸ್ಟ್: ಗೆಲುವಿನ ಕನಸಿನಲ್ಲಿದ್ದ ಟೀಂ ಇಂಡಿಯಾಗೆ ಭ್ರಮನಿರಸ

ಕಾನ್ಪುರ ಟೆಸ್ಟ್: ಗೆಲುವಿನ ಕನಸಿನಲ್ಲಿದ್ದ ಟೀಂ ಇಂಡಿಯಾಗೆ ಭ್ರಮನಿರಸ
ಕಾನ್ಪುರ , ಸೋಮವಾರ, 29 ನವೆಂಬರ್ 2021 (16:54 IST)
ಕಾನ್ಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ಕನಸಿನಲ್ಲಿದ್ದ ಟೀಂ ಇಂಡಿಯಾಗೆ ಶಾಕ್ ಕಾದಿತ್ತು. ಪಂದ್ಯ ಡ್ರಾ ಆಗಿ ನಿರಾಸೆ ಅನುಭವಿಸಿತು.

ದ್ವಿತೀಯ ಇನಿಂಗ್ಸ್ ನಲ್ಲಿ ನ್ಯೂಜಿಲೆಂಡ್ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿ ದಿನದಾಟ ಮುಗಿಸಿತು. ಭಾರತದ ಮೂಲದವರೇ ಆದ ರಚಿನ್ ಜಿಗುಟಿನ ಆಟದಿಂದಾಗಿ ಗೆಲುವಿನ ಕನಸು ಭಗ್ನವಾಯಿತು.  ಬರೋಬ್ಬರಿ 91 ಎಸೆತ ಎದುರಿಸಿದ ರಚಿನ್ ಗಳಿಸಿದ್ದು 18 ರನ್. ಅವರಿಗೆ ಸಾಥ್ ನೀಡಿದ ಅಜಾಜ್ ಪಟೇಲ್ 23 ಎಸೆತ ಎದುರಿಸಿ 2 ರನ್ ಗಳಿಸಿದರು. ಇವರಿಬ್ಬರ ಜೊತೆಯಾಟ ಬೇರ್ಪಡಿಸಲು ವಿಫಲವಾದ ಟೀಂ ಇಂಡಿಯಾ ಬೌಲರ್ ಗಳು ಇಂದಿನ ದಿನದಾಟವೂ ಮುಗಿದಿದ್ದರಿಂದ ಡ್ರಾಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಭಾರತದ ಪರ ರವೀಂದ್ರ ಜಡೇಜಾ 4, ರವಿಚಂದ್ರನ್ ಅಶ್ವಿನ್ 3, ಅಕ್ಸರ್ ಪಟೇಲ್, ಉಮೇಶ್ ಯಾದವ್ ತಲಾ 1 ವಿಕೆಟ್ ಕಬಳಿಸಿದರು. ವೇಗಿ ಇಶಾಂತ್ ಶರ್ಮಾ ಎರಡೂ ಇನಿಂಗ್ಸ್ ಗಳಲ್ಲಿ ವಿಕೆಟ್ ಸಂಪಾದಿಸಲು ವಿಫಲರಾದರು.

Share this Story:

Follow Webdunia kannada

ಮುಂದಿನ ಸುದ್ದಿ

ಕಾನ್ಪುರ ಟೆಸ್ಟ್: ಕಿವೀಸ್ ಜಿಗುಟಾಟಕ್ಕೆ ಬೆಂಡಾದ ಟೀಂ ಇಂಡಿಯಾ ಬೌಲರ್ ಗಳು