Publish Date: Thu, 20 Jan 2022 (16:53 IST)
Updated Date: Thu, 20 Jan 2022 (16:55 IST)
ಹೈದರಾಬಾದ್: 18 ವರ್ಷಗಳ ಸುದೀರ್ಘ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುವ ನಿರ್ಧಾರ ಪ್ರಕಟಿಸಿರುವ ಧನುಷ್ ಮತ್ತು ಐಶ್ವರ್ಯಾ ನಡುವೆ ನಡೆದಿದ್ದೇನು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.
ಇಬ್ಬರ ಅನ್ಯೋನ್ಯ ದಾಂಪತ್ಯ ಕೊನೆಯಾಗಲು ಕಾರಣವೇನಾಯ್ತು ಎಂಬುದು ಎಲ್ಲರಿಗೆ ಪ್ರಶ್ನೆಯಾಗಿ ಉಳಿದಿದೆ. ಸದ್ಯಕ್ಕೆ ಇಬ್ಬರೂ ಹೈದರಾಬಾದ್ ನಲ್ಲಿದ್ದಾರೆ. ಇದು ಮಾಮೂಲು ಗಂಡ-ಹೆಂಡತಿ ಜಗಳವಷ್ಟೇ ಎಂದು ಧನುಷ್ ತಂದೆ ಹೇಳಿಕೆ ನೀಡಿದ್ದರು.
ಇದೀಗ ಹರಿದಾಡುತ್ತಿರುವ ಸುದ್ದಿ ಪ್ರಕಾರ, ಹೈದರಾಬಾದ್ ನಲ್ಲಿ ಇಬ್ಬರೂ ಯಾವುದೋ ವಿಚಾರಕ್ಕೆ ದೊಡ್ಡ ಮಟ್ಟದಲ್ಲಿ ಜಗಳ ಮಾಡಿಕೊಂಡಿದ್ದಾರೆ. ಇದರ ಪರಿಣಾಮವೇ ಇಬ್ಬರೂ ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.