Publish Date: Sun, 16 Jan 2022 (10:10 IST)
Updated Date: Sun, 16 Jan 2022 (10:12 IST)
ಬೆಂಗಳೂರು: ರಾಪರ್ ಚಂದನ್ ಶೆಟ್ಟಿ ಪತ್ನಿ, ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಮೊನ್ನೆಯಷ್ಟೇ ಬಾತ್ ಟವೆಲ್ ಕಿತ್ತೆಸೆಯುವ ವಿಡಿಯೋ ಪ್ರಕಟಿಸಿ ಟ್ರೋಲ್ ಗೊಳಗಾಗಿದ್ದರು. ಇದೀಗ ಹಾಗಲಕಾಯಿ ತಿನ್ನುವ ವಿಡಿಯೋ ಮಾಡಿ ಟ್ರೋಲ್ ಗೊಳಗಾಗಿದ್ದಾರೆ.
ಪತಿ ಚಂದನ್ ಜೊತೆ ಮಕ್ಕಳು ಆಡುವ ಸ್ಟೋನ್, ಪೇಪರ್ ಸೀಝರ್ ಆಟ ಆಡಿ ಗೆದ್ದವರು ಆಪಲ್, ಸೋತವರು ಹಾಗಲಕಾಯಿ ತಿನ್ನುವ ವಿಡಿಯೋವನ್ನು ನಿವೇದಿತಾ ಪ್ರಕಟಿಸಿದ್ದಾರೆ.
ಪ್ರತೀ ಬಾರಿಯೂ ನಿವೇದಿತಾ ಸೋತು ಹಾಗಲಕಾಯಿ ತಿನ್ನುತ್ತಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಮದುವೆಯಾಗಿದ್ದರೂ ಮಕ್ಕಳ ಥರಾ ಆಡ್ತಿದ್ದೀರಾ ಎಂದು ಟ್ರೋಲ್ ಮಾಡಿದ್ದಾರೆ.