Publish Date: Wed, 12 Jan 2022 (17:20 IST)
Updated Date: Wed, 12 Jan 2022 (17:21 IST)
ಬೆಂಗಳೂರು: ರಾಪರ್ ಚಂದನ್ ಶೆಟ್ಟಿ ಪತ್ನಿ, ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ? ಈಕೆಯ ಹೊಸ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೊಸ ರೀಲ್ಸ್ ನಲ್ಲಿ ನಿವೇದಿತಾ ತನ್ನ ಮೈಮೇಲೆ ಸುತ್ತಿಕೊಂಡಿದ್ದ ಟವೆಲ್ ಕಿತ್ತು ಬಿಸಾಕಿದ್ದಾಳೆ! ತಕ್ಷಣವೇ ಹಿಂದೆ ಕೂತಿದ್ದ ಚಂದನ್ ಶೆಟ್ಟಿ ಪತ್ನಿಯನ್ನು ಕ್ಯಾಮರಾದಿಂದ ಮರೆಮಾಚುತ್ತಾರೆ! ಇದನ್ನು ನೋಡಿ ನೆಟ್ಟಿಗರು ಅವಾಕ್ಕಾಗಿದ್ದಾರೆ.
ಆದರೆ ಇದೆಲ್ಲಾ ಗಂಡನನ್ನು ಪ್ರಾಂಕ್ ಮಾಡುವ ಸಲುವಾಗಿ ಎಂದು ನಿವೇದಿತಾ ಬರೆದುಕೊಂಡಿದ್ದಾರೆ. ಅಷ್ಟಕ್ಕೂ ನಿವೇದಿತಾ ತಾವು ಉಟ್ಟಿದ್ದ ಬಟ್ಟೆ ಮೇಲೆಯೇ ಟವೆಲ್ ಸುತ್ತಿಕೊಂಡಿದ್ದರಷ್ಟೇ. ಹಾಗಿದ್ದರೂ ಆಕೆಯ ಈ ಜೋಕ್ ಬಗ್ಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಟೀಕೆಯನ್ನೂ ಮಾಡಿದ್ದಾರೆ.