Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಸಮನ್ವಿ ಅಮ್ಮನ ಹೊಟ್ಟೆಯಲ್ಲಿರುವ ಕಂದನ ಉಳಿಸಿದ ದೇವರು!

webdunia
ಶುಕ್ರವಾರ, 14 ಜನವರಿ 2022 (08:55 IST)
ಬೆಂಗಳೂರು: ರಿಯಾಲಿಟಿ ಶೋ ಸ್ಪರ್ಧಿ ಪುಟಾಣಿ  ಸಮನ್ವಿ ಮತ್ತು ತಾಯಿಗೆ ಆದ ರಸ್ತೆ ಅಪಘಾತದಲ್ಲೂ ದೇವರು ಒಂದು ಮಟ್ಟಿಗೆ ಈ ಕುಟುಂಬದ ಮೇಲೆ ಕರುಣೆ ತೋರಿದ್ದಾನೆ ಎನ್ನಬಹುದು.

ನಿನ್ನೆ ನಡೆದ ಭೀಕರ ಅಪಘಾತಲ್ಲಿ ಸಮನ್ವಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಆಕೆಯ ತಾಯಿ, ನಟಿ ಅಮೃತಾ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಮೃತಾ ಈಗ ಗರ್ಭಿಣಿ. ಅದೃಷ್ಟವಶಾತ್ ಈ ಅಪಘಾತದಲ್ಲಿ ಅಮೃತಾ ಹೊಟ್ಟೆಯಲ್ಲಿದ್ದ ಮಗುವಿಗೆ ಏನೂ ತೊಂದರೆಯಾಗಿಲ್ಲ.

ಮಗುವಿಗೆ ತೊಂದರೆಯಾಗಿಲ್ಲವೆಂದು ವೈದ್ಯರಿಂದ ತಿಳಿದುಬಂದಿದೆ ಎಂದು ನಟಿ ಸುಪ್ರೀತಾ ಶೆಟ್ಟಿ ಹೇಳಿದ್ದಾರೆ. ಹೀಗಾಗಿ ಇನ್ನೊಂದು ಆಘಾತ ತಪ್ಪಿದೆ. ಹಾಗಿದ್ದರೂ ಪುಟಾಣಿ ಸಮನ್ವಿಗೆ ಈ ರೀತಿಯ ದುರಂತ ಸಾವು ಅರಗಿಸಿಕೊಳ್ಳಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ದೇವರೇ ಇಲ್ಲವೇನೋ ಎಂದು ರಿಯಾಲಿಟಿ ಶೋ ನಿರ್ಮಾಪಕ ಸೃಜನ್ ಲೋಕೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ರಸ್ತೆ ಅಪಘಾತದಲ್ಲಿ ರಿಯಾಲಿಟಿ ಶೋ ಸ್ಟಾರ್ ಸಮನ್ವಿ ದುರ್ಮರಣ