Select Your Language

Notifications

webdunia
webdunia
webdunia
webdunia

ಮೊದಲ ವಾರವೇ ದಾಖಲೆ ಮಾಡಿದ ‘ಪುಟ್ಟಕ್ಕನ ಮಕ್ಕಳು’

ಮೊದಲ ವಾರವೇ ದಾಖಲೆ ಮಾಡಿದ ‘ಪುಟ್ಟಕ್ಕನ ಮಕ್ಕಳು’
ಬೆಂಗಳೂರು , ಶುಕ್ರವಾರ, 24 ಡಿಸೆಂಬರ್ 2021 (09:37 IST)
ಬೆಂಗಳೂರು: ಕನ್ನಡ ಕಿರುತೆರೆ ಇತಿಹಾಸದಲ್ಲೇ ಮೊದಲ ವಾರದಲ್ಲೇ ಗರಿಷ್ಠ ಟಿಆರ್ ಪಿ ಪಡೆದ ದಾಖಲೆಯನ್ನು ಪುಟ್ಟಕ್ಕನ ಮಕ್ಕಳು ಧಾರವಾಹಿ ಮಾಡಿದೆ.

ಹಿರಿಯ ನಟಿ ಉಮಾಶ್ರೀ ಪ್ರಮುಖ ಪಾತ್ರದಲ್ಲಿರುವ ‘ಪುಟ್ಟಕ್ಕನ ಮಕ್ಕಳು’ ಧಾರವಾಹಿ ಜೀ ಕನ್ನಡ ವಾಹಿನಿಯಲ್ಲಿ ಡಿಸೆಂಬರ್ 13 ರಿಂದ ಪ್ರಸಾರವಾಗುತ್ತಿದೆ.

ಈ ಧಾರವಾಹಿ ಮೊದಲ ವಾರವೇ 13.5 ಟಿಆರ್ ಪಿ ಪಡೆದಿದ್ದು, ಇದು ಓಪನಿಂಗ್ ವಾರದಲ್ಲಿ ಕಂಡ ಗರಿಷ್ಠ ಟಿಆರ್ ಪಿ ಎಂಬ ದಾಖಲೆ ಮಾಡಿದೆ. ಆರೂರ್ ಜಗದೀಶ್ ನಿರ್ಮಾಣ, ನಿರ್ದೇಶನ ಮಾಡುತ್ತಿರುವ ಧಾರವಾಹಿ ಇದಾಗಿದ್ದು, ಉಮಾಶ್ರೀ ಮತ್ತು ಅವರ ಮೂವರು ಹೆಣ್ಣು ಮಕ್ಕಳ ಮನಮಿಡಿಯುವ ಕತೆಯಿದೆ. ವಿಶೇಷವೆಂದರೆ ಇದಕ್ಕೂ ಮೊದಲು ಆರೂರ್ ಜಗದೀಶ್ ಅವರ ‘ಜೊತೆ ಜೊತೆಯಲಿ’ ಧಾರವಾಹಿ ಆರಂಭದ ವಾರದಲ್ಲಿ ಗರಿಷ್ಠ ಟಿಆರ್ ಪಿ ಪಡೆದ ದಾಖಲೆ ಮಾಡಿತ್ತು. ಇದೀಗ ಅದೇ ನಿರ್ಮಾಣ ಸಂಸ್ಥೆಯ ಧಾರವಾಹಿಯೇ ಆ ದಾಖಲೆಯನ್ನು ಮುರಿದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎರಡು ಪ್ರಮುಖ ಸಿನಿಮಾಗಳು ಇಂದು ರಿಲೀಸ್