Select Your Language

Notifications

webdunia
webdunia
webdunia
webdunia

ಸರಿಗಮಪ ವೇದಿಕೆಯಲ್ಲಿ ಹಾಡಿದ ಅನಿಲ್ ಕುಂಬ್ಳೆ

ಸರಿಗಮಪ ವೇದಿಕೆಯಲ್ಲಿ ಹಾಡಿದ ಅನಿಲ್ ಕುಂಬ್ಳೆ
ಬೆಂಗಳೂರು , ಗುರುವಾರ, 23 ಡಿಸೆಂಬರ್ 2021 (10:00 IST)
ಬೆಂಗಳೂರು: ಜೀ ಕನ್ನಡದ ಸರಿಗಮಪ ಶೋನಲ್ಲಿ ಈ ವಾರಂತ್ಯದಲ್ಲಿ ಅತಿಥಿಯಾಗಿ ಪಾಲ್ಗೊಳ‍್ಳಲಿರುವ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ವೇದಿಕೆಯಲ್ಲಿ ಹಲವಾರು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಅನಿಲ್ ಕುಂಬ್ಳೆ ಕಾಣಿಸಿಕೊಳ್ಳಲಿರುವ ಈ ಧಮಾಕಾ ಎಪಿಸೋಡ್ ನಲ್ಲಿ ತಮ್ಮ ಕ್ರಿಕೆಟ್ ಲೋಕದ ಯಾತ್ರೆ ಶುರುವಾಗಿದ್ದು ಹಂಸಲೇಖರ ಪ್ರೇಮಲೋಕದ ಜೊತೆಗೆ ಎಂದಿದ್ದಾರೆ.

ಜೊತೆಗೆ ವೇದಿಕೆ ಮೇಲೆ ವಿಜಯ್ ಪ್ರಕಾಶ್ ಜೊತೆಗೆ ಎಸ್ ಪಿ ಬಾಲಸುಬ್ರಮಣ್ಯಂ ಹಾಡಿದ್ದ ತಮ್ಮ ಫೇವರಿಟ್ ಹಾಡು, ‘ಮಾಮರವೆಲ್ಲೋ ಕೋಗಿಲೆಯೆಲ್ಲೋ’ ಹಾಡನ್ನು ಹಾಡಿ ರಂಜಿಸಿದ್ದಾರೆ. ಈ ಹಿಂದೆ ಇದೇ ಹಾಡನ್ನು ಐಪಿಎಲ್ ವೇಳೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರರ ಮುಂದೆ ಹಾಡಿದ್ದರು. ಈಗ ಮತ್ತೆ ಅದೇ ಹಾಡನ್ನು ಹಾಡಿದ್ದಾರೆ. ಈ ಸಂಚಿಕೆಗಳು ಈ ಶನಿವಾರ, ಭಾನುವಾರ ಪ್ರಸಾರವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾವೆಲ್ಲಾ ಸೂಸೈಡ್ ಮಾಡ್ಬೇಕಾ? ನಿರ್ಮಾಪಕ ಗುರುದೇಶ್ ಪಾಂಡೆ ಆಕ್ರೋಶ