Select Your Language

Notifications

webdunia
webdunia
webdunia
webdunia

ಯುವತಿಯ ಅಪಹರಿಸಿ ಕಿರುಕುಳ ನೀಡಿದ ಕ್ರಿಕೆಟಿಗನ ವಿರುದ್ಧ ಎಫ್ಐಆರ್

ಯುವತಿಯ ಅಪಹರಿಸಿ ಕಿರುಕುಳ ನೀಡಿದ ಕ್ರಿಕೆಟಿಗನ ವಿರುದ್ಧ ಎಫ್ಐಆರ್
ಲಾಹೋರ್ , ಮಂಗಳವಾರ, 21 ಡಿಸೆಂಬರ್ 2021 (09:40 IST)
ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಪಿನ್ ಬೌಲರ್ ಯಾಸಿರ್ ಶಾ ವಿರುದ್ಧ ಯುವತಿಯ ಅಪಹರಣ, ಕಿರುಕುಳ ಪ್ರಕರಣದಲ್ಲಿ ಎಫ್ ಐಆರ್ ದಾಖಲಾಗಿದೆ.

ಯಾಸಿರ್ ಶಾ ತಮ್ಮ ಗೆಳೆಯನಿಗೆ ಯುವತಿಯೊಬ್ಬಳನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ನಡೆಸಲು ಸಹಾಯ ಮಾಡಿದ್ದಾರೆ ಎಂಬುದು ಆರೋಪ. ಈ ಸಂಬಂಧ ಅವರ ವಿರುದ್ಧ ಲಾಹೋರ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಯಾಸಿರ್ ನ ಸ್ನೇಹಿತ ಅಪಹರಿಸಿದ ಯುವತಿಯನ್ನು ಗನ್ ತೋರಿಸಿ ಬೆದರಿಸಿ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಯುವತಿಯೇ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಲಾಹೋರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎರಡು ದಿನಗಳ ಐಪಿಎಲ್ ಮೆಗಾ ಹರಾಜು ಮೇಳ!