Publish Date: Tue, 21 Dec 2021 (09:30 IST)
Updated Date: Tue, 21 Dec 2021 (09:36 IST)
ಚೆನ್ನೈ: ಲೈಂಗಿಕ ದೌರ್ಜನ್ಯದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾದ ಅಪ್ರಾಪ್ತ ಬಾಲಕಿ ಬರೆದ ಡೆತ್ ನೋಟ್ ಈಗ ತಮಿಳುನಾಡಿನಲ್ಲಿ ಸದ್ದು ಮಾಡುತ್ತಿದೆ.
ಆತ್ಮಹತ್ಯೆಗೆ ಶರಣಾದ 11 ವರ್ಷದ ಬಾಲಕಿ ಡೆತ್ ನೋಟ್ ನಲ್ಲಿ ಲೈಂಗಿಕ ದೌರ್ಜನ್ಯ ನಿಲ್ಲಿಸಿ ಎಂದು ಶೀರ್ಷಿಕೆ ಬರೆದಿದ್ದು, ಕೇವಲ ಅಮ್ಮನ ಗರ್ಭ ಮತ್ತು ಸಮಾಧಿ ಮಾತ್ರವೇ ಮಹಿಳೆಯರಿಗೆ ಸುರಕ್ಷಿತ ಸ್ಥಳ ಎಂದು ಬರೆದಿದ್ದಾಳೆ. ಎಲ್ಲಾ ಪೋಷಕರೂ ತಮ್ಮ ಮಗನಿಗೆ ಮಹಿಳೆಯರ ಜೊತೆ ಹೇಗೆ ವರ್ತಿಸಬೇಕು ಎಂದು ಕಲಿಸಬೇಕು. ಶಿಕ್ಷಕರು ಅಥವಾ ಸಂಬಂಧಿಕರನ್ನು ನಂಬಲಾಗದು ಎಂದೂ ಆಕೆ ಬರೆದುಕೊಂಡಿದ್ದಾಳೆ.
ಬಾಲಕಿಯ ಕುಟುಂಬಸ್ಥರ ಪ್ರಕಾರ ಆಕೆ ಈ ಮೊದಲು ಹೋಗುತ್ತಿದ್ದ ಶಾಲೆಯ ಶಿಕ್ಷಕರು ಯಾರೋ ಆಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಇದರಿಂದಾಗಿ ಆಕೆ ಶಾಲೆ ಬದಲಾಯಿಸಿದ್ದಳು. ಆದರೂ ಕಿರುಕುಳ ತಪ್ಪಿರಲಿಲ್ಲ. ಇದರಿಂದಾಗಿ ಆಕೆಗೆ ನೆಮ್ಮದಿಯೇ ಇರಲಿಲ್ಲ ಎಂದು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.