Publish Date: Mon, 20 Dec 2021 (09:45 IST)
Updated Date: Mon, 20 Dec 2021 (10:10 IST)
ಬೆಂಗಳೂರು: ತಾನು ಪ್ರೀತಿಸಿದ್ದ ಹುಡುಗಿ ಬೇರೆ ಹುಡುಗನ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಳ್ಳುವುದನ್ನು ಸಹಿಸದೇ ಭಗ್ನ ಪ್ರೇಮಿಯೊಬ್ಬ ತಮ್ಮಿಬ್ಬ ಖಾಸಗಿ ಫೋಟೋಗಳನ್ನು ವರನ ಮನೆಯವರಿಗೆ ಕಳುಹಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆರೋಪಿ ದಿಲೀಪ್ ಕುಮಾರ್ ಮತ್ತು ನಿಶ್ಚಿತಾರ್ಥವಾಗಬೇಕಿದ್ದ ಯುವತಿ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಈಗ ಇಬ್ಬರೂ ದೂರವಾಗಿದ್ದಾರೆ.
ಇದೀಗ ಯುವತಿಗೆ ಬೇರೊಬ್ಬನೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ತನ್ನ ಪ್ರೇಯಸಿ ಇನ್ನೊಬ್ಬನ ಜೊತೆ ಮದುವೆಯಾಗುವುದನ್ನು ಸಹಿಸದ ದಿಲೀಪ್ ವರನ ಮನೆಯವರಿಗೆ ಯುವತಿಯ ಖಾಸಗಿ ಫೋಟೋಗಳನ್ನು ಕಳುಹಿಸಿಕೊಟ್ಟಿದ್ದಾನೆ. ಇದರಿಂದಾಗಿ ಮದುವೆ ಮುರಿದುಬಿದ್ದಿದೆ. ಯುವತಿ ಆರೋಪಿ ದಿಲೀಪ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ.