Select Your Language

Notifications

webdunia
webdunia
webdunia
webdunia

ಬಿಟ್ಟಿ ಕಚೋರಿಗಾಗಿ ಅಪ್ರಾಪ್ತನ ಜೀವ ತೆಗೆದ ಪಾಪಿ

ಬಿಟ್ಟಿ ಕಚೋರಿಗಾಗಿ ಅಪ್ರಾಪ್ತನ ಜೀವ ತೆಗೆದ ಪಾಪಿ
ಫರೀದಾಬಾದ್ , ಸೋಮವಾರ, 20 ಡಿಸೆಂಬರ್ 2021 (08:40 IST)
ಫರೀದಾಬಾದ್: ಬಿಟ್ಟಿ ಕಚೋರಿ ತಿನ್ನುವ ಖಯಾಲಿ ಬೆಳೆಸಿಕೊಂಡಿದ್ದ ವ್ಯಕ್ತಿಯೊಬ್ಬ ಕೊನೆಗೆ ತನ್ನ ಸ್ನೇಹಿತನ ಅಪ್ರಾಪ್ತ ಮಗನನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.

ತಂದೆ-ಮಗ ತಳ್ಳು ಗಾಡಿಯಲ್ಲಿ ಕಚೋರಿ ಮಾರಿ ಜೀವನ ಸಾಗಿಸುತ್ತಿದ್ದರು. ಆರೋಪಿ ಇವರ ತಳ್ಳುಗಾಡಿಯಲ್ಲಿ ಬಿಟ್ಟಿಯಾಗಿ ಕಚೋರಿ ತಿನ್ನುತ್ತಿದ್ದ. ದುಡ್ಡು ಕೇಳಿದರೆ ಕೊಡುತ್ತಿರಲಿಲ್ಲ.

ಇದೇ ಕಾರಣಕ್ಕೆ ಇಬ್ಬರ ನಡುವೆ ವಾಗ್ವಾದವಾಗಿದ್ದು, 14 ವರ್ಷದ ಅಪ್ರಾಪ್ತ ಬಾಲಕನನ್ನು ಆರೋಪಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಾಟ್ಸಾಪ್ ಗ್ರೂಪ್‍ನಲ್ಲಿ ಅಶ್ಲೀಲ ವೀಡಿಯೋ ಶೇರ್ ಮಾಡಿದ ಶಿಕ್ಷಕ!