ಅಮರಾವತಿ: ಗರ್ಭಿಣಿಯಾಗಬೇಕೆಂಬ ಆಸೆಗೆ ಯುವತಿಯೊಬ್ಬಳು ಹಸುಗೂಸೊಂದರ ಹೊಕ್ಕುಳ ಬಳ್ಳಿ ಸೇವಿಸಿದ ವಿಲಕ್ಷಣ ಘಟನೆ ನಡೆದಿದೆ.
ಇದರಿಂದಾಗಿ 19 ವರ್ಷದ ಯುವತಿ ಮೃತಪಟ್ಟಿದ್ದಾಳೆ. ಈಕೆಗೆ ಮೂರು ವರ್ಷಗಳ ಹಿಂದೆ ಮದುವೆಯಾಗಿತ್ತು. ಎರಡು ವರ್ಷಗಳಿಂದ ಮಕ್ಕಳನ್ನು ಪಡೆಯಲು ನಾಟಿ ವೈದ್ಯರ ಮದ್ದು ಮಾಡುತ್ತಿದ್ದರು.
ಅದರಂತೆ ಮಗುವಿನ ಹೊಕ್ಕುಳ ಬಳ್ಳಿ ಸೇವಿಸಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಈ ಸಂಬಂಧ ಆಕೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಈಕೆಗೆ ಹೊಕ್ಕುಳ ಬಳ್ಳಿ ಸೇವಿಸಲು ಸಲಹೆ ನೀಡಿದವರು ಯಾರು ಎಂಬುದು ಬಯಲಾಗಬೇಕಿದೆ.