Select Your Language

Notifications

webdunia
webdunia
webdunia
webdunia

ವಿದ್ಯಾರ್ಥಿಗಳ ಗುಂಪಿನಲ್ಲಿ ಅಶ್ಲೀಲ ಮೆಸೇಜ್ ಮಾಡಿದ ಶಿಕ್ಷಕ ಅರೆಸ್ಟ್

ವಿದ್ಯಾರ್ಥಿಗಳ ಗುಂಪಿನಲ್ಲಿ ಅಶ್ಲೀಲ ಮೆಸೇಜ್ ಮಾಡಿದ ಶಿಕ್ಷಕ ಅರೆಸ್ಟ್
ಚೆನ್ನೈ , ಮಂಗಳವಾರ, 21 ಡಿಸೆಂಬರ್ 2021 (09:10 IST)
ಚೆನ್ನೈ: ಶಾಲೆಯ ವಿದ್ಯಾರ್ಥಿಗಳನ್ನು ಹೊಂದಿರುವ ವ್ಯಾಟ್ಸಪ್ ಗ್ರೂಪ್ ನಲ್ಲಿ ಅಶ್ಲೀಲ ವಿಡಿಯೋ ರವಾನಿಸಿದ ಶಿಕ್ಷಕನನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ.

ಕೊರೋನಾ ಕಾರಣದಿಂದ ಆನ್ ಲೈನ್ ತರಗತಿಗೆ ಅನುಕೂಲವಾಗಲು ವ್ಯಾಟ್ಸಪ್ ಗ್ರೂಪ್ ಮಾಡಲಾಗಿತ್ತು. ಈ ಗ್ರೂಪ್ ನಲ್ಲಿ ಗಣಿತ ಶಿಕ್ಷಕನೊಬ್ಬ ಅಶ್ಲೀಲ ವಿಡಿಯೋ ರವಾನಿಸಿದ್ದ.

ತಕ್ಷಣವೇ ವಿದ್ಯಾರ್ಥಿಗಳು ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದರು. ವಿಚಾರಿಸಿದಾಗ ಕುಡಿದ ಅಮಲಿನಲ್ಲಿ ವಿಡಿಯೋ ಕಳುಹಿಸಿರುವುದಾಗಿ ಶಿಕ್ಷಕ ಒಪ್ಪಿಕೊಂಡಿದ್ದಾನೆ. ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೂರರ ಗಡಿ ದಾಟಿದ ಕಂಟೈನ್ಮೆಂಟ್ ವಲಯ!