Select Your Language

Notifications

webdunia
webdunia
webdunia
webdunia

ನೂರರ ಗಡಿ ದಾಟಿದ ಕಂಟೈನ್ಮೆಂಟ್ ವಲಯ!

ನೂರರ ಗಡಿ ದಾಟಿದ ಕಂಟೈನ್ಮೆಂಟ್ ವಲಯ!
ಬೆಂಗಳೂರು , ಮಂಗಳವಾರ, 21 ಡಿಸೆಂಬರ್ 2021 (09:02 IST)
ಬೆಂಗಳೂರು : ಕೊರೊನಾದ ವಿವಿಧ ತಳಿಗಳು ಈಗಾಗಲೇ ವಿಶ್ವವನ್ನು ಬಾಧಿಸುತ್ತಿವೆ. ಅದರಲ್ಲೂ ಮುಖ್ಯವಾಗಿ ಡೆಲ್ಟಾ ಮತ್ತು ಒಮಿಕ್ರಾನ್ ದೊಡ್ಡ ತಲೆನೋವು ಸೃಷ್ಟಿಸಿದ ತಳಿಗಳು.

ಇತ್ತೀಚೆಗಷ್ಟೇ ಪತ್ತೆಯಾದ ಒಮಿಕ್ರಾನ್ ಸೋಂಕಿನ ಪ್ರಸರಣದ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಮುನ್ನೇಚ್ಚರಿಕೆ ಕ್ರಮಕ್ಕೆ ಮುಂದಾಗಿದ್ದು, ಬೆಂಗಳೂರಲ್ಲಿ ಕಂಟೈನ್ಮೆಂಟ್ ಜೋನ್ ಸಂಖ್ಯೆ ನೂರರ ಗಡಿದಾಟಿದೆ. 8 ವಲಯಗಳಲ್ಲಿ ಕಂಟೈನ್ಮೆಂಟ್ ಜೋನ್ಗಳ ಸಂಖ್ಯೆ 106ಕ್ಕೇರಿಕೆಯಾಗಿದೆ.

ಬೊಮ್ಮನಹಳ್ಳಿ-36, ದಕ್ಷಿಣ ವಲಯ-24, ಮಹದೇವಪುರ-12, ಪೂರ್ವ ವಲಯ-11, ಪಶ್ಚಿಮ ವಲಯ-8, ಆರ್.ಆರ್.ನಗರ-4, ಯಲಹಂಕ-4, ದಾಸರಹಳ್ಳಿ-2. 8 ವಲಯಗಳ ಪೈಕಿ ಬೊಮ್ಮನಹಳ್ಳಿಯಲ್ಲಿ ಹೆಚ್ಚು ಕಂಟೈನ್ಮೆಂಟ್ ಜೋನ್ ಮಾಡಲಾಗಿದೆ. ಒಟ್ಟಾರೆ ಕೊವಿಡ್ ಕೇಸ್ ಪತ್ತೆ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಮಿಕ್ರಾನ್‍ಸೋಂಕಿಗೆ ಮೊದಲ ಬಲಿ!