Select Your Language

Notifications

webdunia
webdunia
webdunia
webdunia

ಒಮಿಕ್ರಾನ್‍ಸೋಂಕಿಗೆ ಮೊದಲ ಬಲಿ!

ಒಮಿಕ್ರಾನ್‍ಸೋಂಕಿಗೆ ಮೊದಲ ಬಲಿ!
ನವದೆಹಲಿ , ಮಂಗಳವಾರ, 21 ಡಿಸೆಂಬರ್ 2021 (08:57 IST)
ಒಮಿಕ್ರಾನ್ ವೈರಾಣು ವಿಶ್ವಕ್ಕೇ ವ್ಯಾಪಿಸಿದ್ದರೂ ಇದುವರೆಗೆ ಈ ಸೋಂಕಿಗೆ ಯುಕೆಯಲ್ಲಿ 14 ಸಾವಾಗಿದೆ. ಆದರೆ ವಿಶ್ವದ 77ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಸೋಂಕು ಹರಡಿದೆ.
 
ಆದರೆ ಇದೀಗ ಯುಎಸ್ನಲ್ಲಿ ಒಮಿಕ್ರಾನ್ಗೆ ಮೊದಲ ಬಲಿಯಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.   ಈಗ ಯುಎಸ್ನಲ್ಲಿ ಒಮಿಕ್ರಾನ್ನಿಂದ ಮೃತಪಟ್ಟ ವ್ಯಕ್ತಿಗೆ ಕೊವಿಡ್ 19 ಲಸಿಕೆ ತೆಗೆದುಕೊಂಡಿರಲಿಲ್ಲ ಎಂದು ಹೇಳಲಾಗಿದೆ.

ಆದರೆ ಈ ಸಾವಿನ ಬಗ್ಗೆ ಯುಎಸ್ನ ಕಾಯಿಲೆ ನಿಯಂತ್ರಣ ಮತ್ತು ತಡೆ ಕೇಂದ್ರ  ಯಾವುದೇ ಹೇಳಿಕೆಯನ್ನೂ ನೀಡಿಲ್ಲ.ಯುನೈಟೆಡ್ ಸ್ಟೇಟ್ನ ಟೆಕ್ಸಾಸ್ ರಾಜ್ಯದಲ್ಲಿ ಹ್ಯಾರಿ ಕೌಂಟಿ ಎಂಬಲ್ಲಿ ಒಮಿಕ್ರಾನ್ ನಿಂದ ವ್ಯಕ್ತಿ ಮೃತಪಟ್ಟಿದ್ದು, ಇವರಿಗೆ 50 ರಿಂದ 60ರೊಳಗೆ ವಯಸ್ಸಾಗಿರಬಹುದು ಎಂದು ಹೇಳಲಾಗಿದೆ.

ಇವರು ಸ್ಥಳೀಯವಾಗಿ ಕೊವಿಡ್ 19 ಹೊಸ ತಳಿ ಒಮಿಕ್ರಾನ್ನಿಂದ ಮೃತಪಟ್ಟ ಮೊದಲ ವ್ಯಕ್ತಿ ಎಂದು ಕೌಂಟಿ ಜಡ್ಜ್ ಲಿನಾ ಹಿಡಾಲ್ಗೋ ಟ್ವೀಟ್ ಮಾಡಿ ತಿಳಿಸಿದ್ದಾರೆ.  ಹಾಗೇ, ದಯವಿಟ್ಟು ಎಲ್ಲರೂ ಲಸಿಕೆ ಪಡೆಯಿರಿ ಎಂದೂ ಮನವಿ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ತಾಳಿಯನ್ನೇ ಕಿತ್ತ ತಂದೆ! ಮುಂದೇನಾಯ್ತು?