Select Your Language

Notifications

webdunia
webdunia
webdunia
webdunia

ತೀವ್ರವಾಗಿ ಹರಡುತ್ತಿರುವ ಒಮಿಕ್ರಾನ್!

webdunia
ಬ್ರಿಟನ್ , ಭಾನುವಾರ, 19 ಡಿಸೆಂಬರ್ 2021 (10:03 IST)
ಬ್ರಿಟನ್ : ಕೊರೊನಾ ವೈರಸ್ನ ಒಮಿಕ್ರಾನ್ ರೂಪಾಂತರವು ಬ್ರಿಟನ್ನಲ್ಲಿ ಅತ್ಯಂತ ವೇಗವಾಗಿ ಹರಡುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.

ಬ್ರಿಟಿಷ್ ಸರ್ಕಾರದ ಅಂಕಿಅಂಶಗಳ ಪ್ರಕಾರ, ಕೇವಲ 24 ಗಂಟೆಗಳ ಅವಧಿಯಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಾಗಿದೆ. ಇದಲ್ಲದೆ, ಲಂಡನ್ನ ಮೇಯರ್ ಸಾದಿಕ್ ಖಾನ್ ಅವರು ನಗರದ ಆಸ್ಪತ್ರೆಗಳಿಗೆ ಒಮಿಕ್ರಾನ್ ಸೋಂಕನ್ನು ನಿರ್ವಹಿಸಲು ಸಹಾಯವಾಗುವ ದೃಷ್ಟಿಯಿಂದ ಇದನ್ನು ಪ್ರಮುಖ ಘಟನೆ ಎಂದು ಎಚ್ಚರಿಕೆ ಘೋಷಿಸಿದ್ದಾರೆ.

ಶುಕ್ರವಾರ ಸಂಜೆಯ ವೇಳೆಗೆ ಬ್ರಿಟನ್‌ನಾದ್ಯಂತ ದಾಖಲಾದ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಸುಮಾರು 25,000 ಕ್ಕೆ ತಲುಪಿದೆ ಎಂದು ಬ್ರಿಟನ್ ಆರೋಗ್ಯ ಭದ್ರತಾ ಸಂಸ್ಥೆ (ಯುಕೆಎಚ್‌ಎಸ್ಎ) ಹೇಳಿದೆ. ಕಳೆದ 24 ಗಂಟೆಗಳಲ್ಲಿ ಸುಮಾರು 10,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವುದಕ್ಕೆ ಸಾಕ್ಷಿಯಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತೆಯ ಅತ್ಯಾಚಾರವೆಸಗಿದವರಿಗೆ 20 ವರ್ಷ ಜೈಲು