Select Your Language

Notifications

webdunia
webdunia
webdunia
webdunia

ರೈತರಿಂದ ಭೂಮಿ ಖರೀದಿಯ ಉದ್ದೇಶವೇನು?

ರೈತರಿಂದ ಭೂಮಿ ಖರೀದಿಯ ಉದ್ದೇಶವೇನು?
ನವದೆಹಲಿ , ಶನಿವಾರ, 18 ಡಿಸೆಂಬರ್ 2021 (08:37 IST)
ಗಂಗಾ ಎಕ್ಸ್ಪ್ರೆಸ್ ವೇ ನಿರ್ಮಣಕ್ಕಾಗಿ ಶೇ.94ರಷ್ಟು ಭೂಮಿಯನ್ನು ರೈತರಿಂದ ಖರೀದಿಸಲಾಗಿದೆ ಎಂದು ಉತ್ತರಪ್ರದೇಶ ಸರ್ಕಾರ ಹೇಳಿದೆ. ಒಟ್ಟಾರೆ 7386 ಹೆಕ್ಟೇರ್ ಭೂಮಿ ಬೇಕಾಗಿತ್ತು.
 
ಅದನ್ನು ಒಟ್ಟು 82,750 ರೈತರಿಂದ ಖರೀದಿ ಮಾಡಲಾಗಿದೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿಯವರು ಪೂರ್ವಾಂಚಲ ಎಕ್ಸ್ಪ್ರೆಸ್ ವೇ ಉದ್ಘಾಟನೆ ಮಾಡಿದ್ದರು. ಅದು ಉತ್ತರಪ್ರದೇಶದ ಪೂರ್ವ ಜಿಲ್ಲೆಗಳನ್ನು ಸಂಪರ್ಕಿಸುವ ಹೆದ್ದಾರಿಯಾಗಿದೆ.

ರಾಜ್ಯದಲ್ಲಿರುವ ಉಳಿದ ಎಕ್ಸ್ಪ್ರೆಸ್ವೇಗಳಂತೆ ಈ ಎಕ್ಸ್ಪ್ರೆಸ್ ವೇ ಕೂಡ ಏರ್ಸ್ಟ್ರಿಪ್ ಹೊಂದಿರಲಿದ್ದು, ವಿಮಾನಗಳ ತುರ್ತು ಭೂಸ್ಪರ್ಶಕ್ಕೆ ಅವಕಾಶ ಇರಲಿದೆ. ಈ ಏರ್ಸ್ಟ್ರಿಲ್ ಶಹಜಾನ್ಪುರದಲ್ಲಿ 3.5ಕಿಮೀಗಳಷ್ಟು ಉದ್ದ ಇರಲಿದೆ.

ಯೋಜನೆಯ ವಿನ್ಯಾಸದ ಪ್ರಕಾರ ಎಕ್ಸ್ಪ್ರೇಸ್ ವೇಗೆ ಘರ್ಮುಕ್ತೇಶ್ವರ್ನಲ್ಲಿ ಸೇತುವೆ ನಿರ್ಮಾಣವಾಗಲಿದೆ. ಇದು ಹಾಪುರ ಮತ್ತು ಬುಲಂದ್ಶಹರ್ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ.

ಅದರ ಹೊರತಾಗಿ ಗಂಗಾ ಎಕ್ಸ್ಪ್ರೆಸ್ ವೇ ಮಧ್ಯೆ, 9 ಸಾರ್ವಜನಿಕ ಅನುಕೂಲ ಕೇಂದ್ರಗಳು, 7 ರೈಲ್ವೆ ಮೇಲ್ಸೇತುವೆಗಳು, 14 ದೊಡ್ಡ ಸೇತುವೆಗಳು, 126 ಚಿಕ್ಕ ಸೇತುವೆಗಳು, 381 ಅಂಡರ್ಪಾಸ್ಗಳು ನಿರ್ಮಾಣವಾಗಲಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಮೋದಿ ಮತ್ತೆ ಉತ್ತರ ಪ್ರದೇಶಕ್ಕೆ ಭೇಟಿ! ಕಾರಣವೇನು?