Select Your Language

Notifications

webdunia
webdunia
webdunia
webdunia

ಅಪ್ರಾಪ್ತ, ಗರ್ಭಿಣಿ ಬಾಲಕಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್

ಅಪ್ರಾಪ್ತ, ಗರ್ಭಿಣಿ ಬಾಲಕಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್
ಮಂಡ್ಯ , ಶನಿವಾರ, 18 ಡಿಸೆಂಬರ್ 2021 (10:09 IST)
ಮಂಡ್ಯ: ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳೆನ್ನಲಾದ ಅಪ್ರಾಪ್ತ, ಗರ್ಭಿಣಿ ಬಾಲಕಿಯ ಸಾವಿಗೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ನೆರೆಮನೆಯಾತನಿಂದ ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿ ಗರ್ಭಿಣಿಯಾಗಿದ್ದಳು. ಹೊಟ್ಟೆನೋವು ಎಂದಾಗ ವೈದ್ಯರ ಬಳಿ ಪೋಷಕರು ಕರೆದೊಯ್ದಾಗ ಪ್ರಕರಣ ಬಯಲಿಗೆ ಬಂದಿತ್ತು. ನೆರೆಮನೆಯ 50 ವರ್ಷದ ವ್ಯಕ್ತಿ ಕೃತ್ಯವೆಸಗಿರುವುದನ್ನು ಬಾಲಕಿ ಬಾಯ್ಬಿಟ್ಟಿದ್ದಳು.

ಡಿಸೆಂಬರ್ 16 ರಂದು ಬಾಲಕಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಗ ಇದು ಆತ್ಮಹತ್ಯೆ ಎನ್ನಲಾಗಿತ್ತು. ಆದರೆ ಇದೀಗ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಪೋಷಕರು ನಾವು ಮನೆಯಲ್ಲಿಲ್ಲದಿದ್ದಾಗ ಅತ್ಯಾಚಾರ ಮಾಡಿದ ಆರೋಪಿಯೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಕಿಂಗ್! ಬೀದಿನಾಯಿಗಳಿಗೆ ಊಟ ಹಾಕುವ ಮುನ್ನ ಹುಷಾರ್!