ಬೆಂಗಳೂರು: ಸ್ನೇಹಿತೆ ಮನೆಗೆ ಬಂದಿದ್ದ ಯುವತಿಗೆ ಅವರ ಮನೆ ಲಾಕರ್ ನಲ್ಲಿ ಲಕ್ಷಾಂತರ ರೂಪಾಯಿ ಹಣ, ಚಿನ್ನಾಭರಣ ನೋಡಿ ದುರಾಸೆಯಾಗುತ್ತದೆ. ಇದುವೇ ಆಕೆಯನ್ನು ತಪ್ಪುದಾರಿಗೆಳೆಯುತ್ತದೆ.
									
			
			 
 			
 
 			
			                     
							
							
			        							
								
																	ಅಜ್ರಾ ಸಿದ್ಧಿಕಿ ಎಂಬಾಕೆ ಸ್ನೇಹಿತೆ ಮನೆಗೆ ಬಂದು ಬಟ್ಟೆ ಬದಲಾಯಿಸುವ ನೆಪದಲ್ಲಿ ಲಾಕರ್ ನಲ್ಲಿದ್ದ ನಗ-ನಗದು ದೋಚಿ ಪರರಾರಿಯಾಗಿದ್ದಾಳೆ. ಮೊದಲು ಬಟ್ಟೆ ಬದಲಾಯಿಸಲು ಹೋಗಿದ್ದಾಗ ಲಾಕರ್ ಗೆ ಬೀಗ ಹಾಕಿರಲಿಲ್ಲ. ಆಗ ಆರೋಪಿಗೆ ಹಣ, ಚಿನ್ನಾಭರಣ ಕಂಡುಬಂದಿದೆ.
									
										
								
																	ಹೀಗಾಗಿ ಇದನ್ನು ದೋಚಲು ಮತ್ತೆ ಬಟ್ಟೆ ಬದಲಾಯಿಸುವ ನೆಪ ಹೂಡಿ ಕೊಠಡಿಯೊಳಗೆ ಸೇರಿಕೊಂಡ ಯುವತಿ ಕದ್ದು ಪರಾರಿಯಾಗಿದ್ದಾಳೆ. ರಾತ್ರಿ ಮನೆಯವರಿಗೆ ಮನೆಯಲ್ಲಿನ ಆಭರಣ, ಹಣ ಕಳುವಾಗಿರುವುದು ಗೊತ್ತಾಗಿದೆ. ಅದರಂತೆ ಅಜ್ರಾ ಮೇಲೆ ಸಂಶಯಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ವಿಚಾರಣೆ ನಡೆಸಿದಾಗ ಸತ್ಯ ಬಯಲಿಗೆ ಬಂದಿದೆ.