Publish Date: Fri, 17 Dec 2021 (09:00 IST)
Updated Date: Fri, 17 Dec 2021 (09:12 IST)
ಮುಂಬೈ: 2017 ರಲ್ಲಿ ಅನಿಲ್ ಕುಂಬ್ಳೆ ಜೊತೆಗೆ ವೈಮನಸ್ಯ ಮಾಡಿಕೊಂಡಿದ್ದ ವಿರಾಟ್ ಕೊಹ್ಲಿ ಅವರನ್ನು ಕೋಚ್ ಹುದ್ದೆಯಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದರು. ಅದೇ ಕೊಹ್ಲಿ ಇಂದೀಗ ಸೀಮಿತ ಓವರ್ ಗಳ ನಾಯಕತ್ವ ಕಳೆದುಕೊಂಡಿದ್ದಾರೆ. ಈ ವೇಳೆ ಕೆಲವು ಅಭಿಮಾನಿಗಳು ಕೊಹ್ಲಿಗೆ ಅಂದಿನ ಘಟನೆಯನ್ನು ನೆನಪಿಸಿದ್ದಾರೆ.
ಅಂದು ಅನಿಲ್ ಕುಂಬ್ಳೆಯನ್ನು ನಿಮಗೆ ಇಷ್ಟವಾಗಿಲ್ಲ ಎಂಬ ಕಾರಣಕ್ಕೆ ನಿಮ್ಮ ಅಧಿಕಾರ ಉಪಯೋಗಿಸಿ ಕಿತ್ತೊಗೆದಿರಿ. ಇಂದು ಅದೇ ಸ್ಥಿತಿ ನಿಮಗೆ ಬಂದಿದೆ ಎಂದು ಕೆಲವರು ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಕುಂಬ್ಳೆಯನ್ನು ಕಿತ್ತೊಗೆದು ರವಿಶಾಸ್ತ್ರಿಯಂತಹ ದುರ್ಬಲ ಕೋಚ್ ನ್ನು ತಂದಿರಿ. ಕೆಲವು ಕ್ರಿಕೆಟಿಗರೊಂದಿಗೆ ಮೈದಾನದಲ್ಲೂ ಕಿತ್ತಾಡಿದಿರಿ. ಇದೆಲ್ಲದಕ್ಕೂ ಈಗ ಬೆಲೆ ತೆರುತ್ತಿದ್ದೀರಿ ಎಂದು ಕೆಲವರು ಕೊಹ್ಲಿಯನ್ನು ಜರಿದಿದ್ದಾರೆ.