Select Your Language

Notifications

webdunia
webdunia
webdunia
webdunia

ಮಗು ಫೋಟೋ ತೆಗೀಬೇಡಿ! ವಿರಾಟ್ ಕೊಹ್ಲಿ ಮನವಿ

ವಿರಾಟ್ ಕೊಹ್ಲಿ
ಮುಂಬೈ , ಗುರುವಾರ, 16 ಡಿಸೆಂಬರ್ 2021 (10:27 IST)
ಮುಂಬೈ: ದ.ಆಫ್ರಿಕಾ ಪ್ರವಾಸಕ್ಕೆ ವಿಮಾನವೇರಲು ಬಸ್ ನಲ್ಲಿ ಬಂದಿಳಿದ ಟೀಂ ಇಂಡಿಯಾ ಕ್ರಿಕೆಟಿಗರ ಫೋಟೋ ತೆಗೆಯಲು ಫೋಟೋಗ್ರಾಫರ್ ಗಳು ಮುತ್ತಿಕೊಂಡಿದ್ದರು. ಈ ವೇಳೆ ವಿರಾಟ್ ಕೊಹ್ಲಿ ತಮ್ಮ ಮಗಳು ವಮಿಕಾಳನ್ನು ರಕ್ಷಿಸಲು ಮುಂದಾದರು.

ವಮಿಕಾಳ ಮುಖವನ್ನು ಕೊಹ್ಲಿ ದಂಪತಿ ಇದುವರೆಗೆ ಹೊರಗೆಲ್ಲೂ ತೋರಿಸಿಲ್ಲ. ಆಕೆಯ ಫೋಟೋ ತೆಗೆಯಲು ಮಾಧ್ಯಮಗಳಿಗೂ ಅವಕಾಶ ಕೊಟ್ಟಿಲ್ಲ. ಈ ಬಾರಿಯೂ ಅದೇ ರೀತಿ ಆಗಿದೆ.

ಅನುಷ್ಕಾ, ವಮಿಕಾ ಜೊತೆ ಇತರ ಆಟಗಾರರೊಂದಿಗೆ ಬಸ್ ನಲ್ಲಿದ್ದ ಬಂದ ವಿರಾಟ್ ಕೊಹ್ಲಿ ಮೊದಲು ತಾವೇ ಇಳಿದು ನೇರವಾಗಿ ಫೋಟೋಗ್ರಾಫರ್ ಗಳ ಬಳಿ ತೆರಳಿದ್ದಾರೆ. ಬಳಿಕ ದಯವಿಟ್ಟು ಮಗುವಿನ ಫೋಟೋ ತೆಗೆಯಬೇಡಿ ಎಂದು ಮನವಿ ಮಾಡಿ, ಪತ್ನಿ ಅನುಷ್ಕಾ, ಮಗಳೊಂದಿಗೆ ತೆರಳಿದ್ದಾರೆ. ಈ ವೇಳೆ ಆದಷ್ಟು ವಮಿಕಾಳ ಮುಖದರ್ಶನವಾಗದಂತೆ ಕೊಹ್ಲಿ ದಂಪತಿ ಪ್ರಯತ್ನಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದ.ಆಫ್ರಿಕಾದಲ್ಲಿ ಟೀಂ ಇಂಡಿಯಾಗೆ ರಾಜವೈಭೋಗ