Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಆರೋಪ ನಿರಾಕರಿಸಿದ ಬಿಸಿಸಿಐ

ವಿರಾಟ್ ಕೊಹ್ಲಿ ಆರೋಪ ನಿರಾಕರಿಸಿದ ಬಿಸಿಸಿಐ
ಮುಂಬೈ , ಬುಧವಾರ, 15 ಡಿಸೆಂಬರ್ 2021 (17:10 IST)
ಮುಂಬೈ: ನಾಯಕತ್ವದಿಂದ ಪದಚ್ಯುತಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಂವಹನ ಕೊರತೆಯಾಗಿತ್ತು ಎಂಬ ವಿರಾಟ್ ಕೊಹ್ಲಿ ಹೇಳಿಕೆಯನ್ನು ಬಿಸಿಸಿಐ ನಿರಾಕರಿಸಿದೆ.

ಟಿ20 ನಾಯಕತ್ವ ತ್ಯಜಿಸುವಾಗ ಬಿಸಿಸಿಐ ತನಗೆ ತ್ಯಜಿಸದಂತೆ ಮನವಿ ಮಾಡಿತ್ತು ಎಂಬ ಗಂಗೂಲಿ ಹೇಳಿಕೆಯನ್ನು ಕೊಹ್ಲಿ ನಿರಾಕರಿಸಿದ್ದರು. ಯಾರೂ ನನ್ನನ್ನು ನಾಯಕತ್ವ ಬಿಡದಂತೆ ಹೇಳಿರಲಿಲ್ಲ ಎಂದಿದ್ದರು.

ಆದರೆ ಕೊಹ್ಲಿ ಹೇಳಿಕೆಯನ್ನು ನಿರಾಕರಿಸಿರುವ ಬಿಸಿಸಿಐ, ಸೆಪ್ಟೆಂಬರ್ ನಲ್ಲಿಯೇ ಟಿ20 ನಾಯಕತ್ವ ತ್ಯಜಿಸದಂತೆ ಮನವಿ ಮಾಡಿದ್ದೆವು. ಅವರನ್ನು ಈ ವಿಚಾರದಲ್ಲಿ ಕಡೆಗಣಿಸಿಯೇ ಇರಲಿಲ್ಲ. ವಿರಾಟ್ ಟಿ20 ನಾಯಕತ್ವ ತ್ಯಜಿಸಿದಾಗ ಸೀಮಿತ ಓವರ್ ಗಳ ಎರಡೂ ಮಾದರಿಗೆ ಒಬ್ಬರೇ ನಾಯಕರಾಗುವುದು ಸೂಕ್ತ ಎಂದು ಆಯ್ಕೆಗಾರರು ರೋಹಿತ್ ರನ್ನೇ ನಾಯಕರಾಗಿ ಮಾಡಿದರು. ಈ ಬಗ್ಗೆ ಸಭೆ ನಡೆಯುವ ಬೆಳಿಗ್ಗೆಯೂ ವಿರಾಟ್ ಗೆ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಮಾಹಿತಿ ನೀಡಿದ್ದರು’ ಎಂದು ಬಿಸಿಸಿಐ ಮೂಲಗಳು ಹೇಳಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಸಿಐ ವಿರುದ್ಧವೇ ತಿರುಗಿ ಬಿದ್ದ ವಿರಾಟ್ ಕೊಹ್ಲಿ