Publish Date: Wed, 15 Dec 2021 (10:13 IST)
Updated Date: Wed, 15 Dec 2021 (10:15 IST)
ಮುಂಬೈ: ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಬರಲು ತೀರ್ಮಾನಿಸಿರುವ ವಿರಾಟ್ ಕೊಹ್ಲಿ ಮನವೊಲಿಸಲು ಬಿಸಿಸಿಐ ಮುಂದಾಗಿದೆ.
ನಾಯಕತ್ವದಿಂದ ಪದಚ್ಯುತಗೊಳಿಸಿದ ಬೇಸರಕ್ಕೆ ಕೊಹ್ಲಿ ಕೌಟುಂಬಿಕ ಕಾರಣ ನೀಡಿ ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ಆಡದೇ ಇರಲು ತೀರ್ಮಾನಿಸಿದ್ದಾರೆ ಎಂಬ ಸುದ್ದಿಗಳಿತ್ತು.
ಇದರ ಬೆನ್ನಲ್ಲೇ ಬಿಸಿಸಿಐ ಕೊಹ್ಲಿಗೆ ಏಕದಿನ ಸರಣಿಯಿಂದ ಹೊರಬಾರದಂತೆ ಮನವಿ ಮಾಡಿದೆ ಎನ್ನಲಾಗಿದೆ. ಬಿಸಿಸಿಐ ಮನವಿ ಬಳಿಕ ಕೊಹ್ಲಿ ನಿರ್ಧಾರದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ.