Publish Date: Tue, 14 Dec 2021 (10:40 IST)
Updated Date: Tue, 14 Dec 2021 (10:49 IST)
ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಬೆಂಗಳೂರಿನ ಎನ್ ಸಿಎನಲ್ಲಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.
ದ್ರಾವಿಡ್ ಬಳಿಕ ಎನ್ ಸಿಎ ಅಧ್ಯಕ್ಷರಾಗಿ ನೇಮಕವಾಗಿರುವ ವಿವಿಎಸ್ ಲಕ್ಷ್ಮಣ್, ಬೆಂಗಳೂರಿನ ಎನ್ ಸಿಎ ಕೇಂದ್ರಕ್ಕೆ ಆಗಮಿಸಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿಕೊಂಡರು.
ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದ್ರಾವಿಡ್ ಟೀಂ ಇಂಡಿಯಾ ಕೋಚ್ ಆಗಿ ನೇಮಕವಾದ ಬಳಿಕ ಬಿಸಿಸಿಐ ಅಧ್ಯಕ್ಷ ಗಂಗೂಲಿ ಒತ್ತಾಯದ ಮೇರೆಗೆ ಲಕ್ಷ್ಮಣ್ ಎನ್ ಸಿಎ ಹುದ್ದೆಯನ್ನು ಒಪ್ಪಿಕೊಂಡಿದ್ದರು. ಇದೀಗ ಟೀಂ ಇಂಡಿಯಾಗೆ ಯುವ ಆಟಗಾರರನ್ನು ಸಿದ್ಧಗೊಳಿಸುವ ಹೊಣೆ ಅವರದ್ದಾಗಿದೆ. ಇದರ ಮೊದಲ ಹೆಜ್ಜೆಯಾಗಿ ನಿನ್ನೆ ಎನ್ ಸಿಎ ಅಧಿಕಾರಿಗಳೊಂದಿಗೆ ಲಕ್ಷ್ಮಣ್ ಮಾತುಕತೆ ನಡೆಸಿದ್ದಾರೆ.