Publish Date: Fri, 10 Dec 2021 (09:14 IST)
Updated Date: Fri, 10 Dec 2021 (09:16 IST)
ಮುಂಬೈ: ಏಕದಿನ ನಾಯಕತ್ವದಿಂದ ಕೊಹ್ಲಿಯನ್ನು ಪದಚ್ಯುತಗೊಳಿಸಿರುವುದಕ್ಕೆ ವಿರಾಟ್ ಕೊಹ್ಲಿ ಅಭಿಮಾನಿಗಳು ಬಿಸಿಸಿಐ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರಹಾಕುತ್ತಿದ್ದಾರೆ.
ಕಳೆದ ಐದು ವರ್ಷಗಳಿಂದ ತಂಡದ ನಾಯಕರಾಗಿರುವ ಕೊಹ್ಲಿಗೆ ಈ ರೀತಿ ಪದಚ್ಯುತಗೊಳಿಸಿ ಅವಮಾನ ಮಾಡಬೇಕಿತ್ತಾ ಎಂದು ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ.
ಕೊಹ್ಲಿ ಸಾಧನೆಗಳ ಪಟ್ಟಿ ನೀಡಿ ಇಂಥಾ ಅದ್ಭುತ ನಾಯಕನನ್ನು ಕೇವಲ ಒಂದು ಟ್ವೀಟ್ ಅಥವಾ ಈಮೇಲ್ ಹೇಳಿಕೆಯಿಂದ ಪದಚ್ಯುತಗೊಳಿಸಿ ಅವಮಾನಿಸಿದ್ದು ಸರಿಯಲ್ಲ ಎಂದು ಕೊಹ್ಲಿ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.