ಮುಂಬೈ: ಏಕದಿನ ನಾಯಕತ್ವದಿಂದ ಕಿತ್ತು ಹಾಕಿದ ಬೇಸರದಲ್ಲಿರುವ ವಿರಾಟ್ ಕೊಹ್ಲಿ ಬಿಸಿಸಿಐ ಮೇಲೆ ಹಠ ಸಾಧಿಸುತ್ತಿದ್ದಾರಾ? ಇಂತಹದ್ದೊಂದು ಪ್ರಶ್ನೆ ಮೂಡಿದೆ.
ಬುಧವಾರ ಟೀಂ ಇಂಡಿಯಾ ಟೆಸ್ಟ್ ಸರಣಿ ಆಡಲು ದ.ಆಫ್ರಿಕಾಗೆ ತೆರಳಲಿದೆ. ಇದಕ್ಕಾಗಿ ಬಿಸಿಸಿಐ ಟೀಂ ಇಂಡಿಯಾ ಕ್ರಿಕೆಟಿಗರಿಗೆ ವಿಮಾನ ಟಿಕೆಟ್ ಬುಕ್ ಮಾಡಿದೆ. ಆದರೆ ಕೊಹ್ಲಿ ಮಾತ್ರ ಈ ತಂಡದ ಜೊತೆಗೆ ಬರುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ.
ಅದರ ಬದಲು ಕೊಹ್ಲಿ ತಮ್ಮದೇ ಚಾರ್ಟೆಡ್ ಫ್ಲೈಟ್ ಮುಖಾಂತರ ದ.ಆಫ್ರಿಕಾಗೆ ತೆರಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಏಕದಿನ ನಾಯಕತ್ವದಿಂದ ಕಿತ್ತು ಹಾಕಿದ ಬೇಸರವನ್ನು ಕೊಹ್ಲಿ ಈ ರೀತಿ ಹೊರಹಾಕುತ್ತಿದ್ದಾರೆ ಎನ್ನಲಾಗಿದೆ. ಆದರೆ ಇದ್ಯಾವುದೂ ಕನ್ ಫರ್ಮ್ ಆಗಿಲ್ಲ.