Publish Date: Tue, 14 Dec 2021 (08:50 IST)
Updated Date: Tue, 14 Dec 2021 (09:06 IST)
ಮುಂಬೈ: ರೋಹಿತ್ ಶರ್ಮಾ ಈಗ ಟೀಂ ಇಂಡಿಯಾದ ಸೀಮಿತ ಓವರ್ ಗಳ ನಾಯಕರಾಗಿ ಆಯ್ಕೆಯಾಗಿದ್ದಾರೆ. ಹಾಗಿದ್ದರೆ ಅವರ ವೇತನದಲ್ಲೂ ಬದಲಾವಣೆಯಾಗುತ್ತಾ? ಇದಕ್ಕೆ ಉತ್ತರ ಇಲ್ಲಿದೆ.
ಟೀಂ ಇಂಡಿಯಾದಲ್ಲಿ ನಾಯಕರಾದ ಮಾತ್ರಕ್ಕೆ ಯಾವುದೇ ಆಟಗಾರನ ವೇತನ ಹೆಚ್ಚಾಗಲ್ಲ. ಇಲ್ಲಿ ಗುತ್ತಿಗೆ ಆಧಾರಿತ ವ್ಯವಸ್ಥೆಯಿದೆ.
ರೋಹಿತ್ ಶರ್ಮಾ ಇತರ ಸ್ಟಾರ್ ಆಟಗಾರರಂತೆ ಮೇಲ್ದರ್ಜೆಯ ಎ ಪ್ಲಸ್ ಶ್ರೇಣಿಯ ಗುತ್ತಿಗೆ ಹೊಂದಿದ್ದಾರೆ. ಅದರಂತೆ ಕೊಹ್ಲಿ, ಬುಮ್ರಾಗೆ ಸಿಗುವಂತೆ ರೋಹಿತ್ ಗೂ ವಾರ್ಷಿಕವಾಗಿ 7 ಕೋಟಿ ರೂ. ಸಿಗುತ್ತದೆ. ಇನ್ನು ಮುಂದೆ ನಾಯಕರಾದ ಮೇಲೆಯೂ ಅವರ ಸಂಭಾವನೆ ಇಷ್ಟೇ ಇರಲಿದೆ. ಇದರಲ್ಲಿ ಯಾವುದೇ ಬದಲಾವಣೆಯಿಲ್ಲ.