Publish Date: Mon, 13 Dec 2021 (10:01 IST)
Updated Date: Mon, 13 Dec 2021 (10:13 IST)
ಮುಂಬೈ: ದ.ಆಫ್ರಿಕಾಗೆ ಟೆಸ್ಟ್ ಸರಣಿ ಆಡಲು ತೆರಳಲಿರುವ ಟೀಂ ಇಂಡಿಯಾ ಕ್ರಿಕೆಟಿಗರು ಮುಂಬೈನಲ್ಲಿ ಕ್ವಾರಂಟೈನ್ ಗೊಳಗಾಗಿದ್ದಾರೆ.
ಮೂರು ದಿನಗಳ ಕ್ವಾರಂಟೈನ್ ಮುಗಿಸಿ ಬುಧವಾರದಂದು ಕ್ರಿಕೆಟಿಗರು ದ.ಆಫ್ರಿಕಾಗೆ ವಿಮಾನವೇರಲಿದ್ದಾರೆ. ವಿಮಾನ ನಿಲ್ದಾಣದ ಪಕ್ಕವೇ ಇರುವ ಪಂಚತಾರಾ ಹೋಟೆಲ್ ನಲ್ಲಿ ಕ್ವಾರಂಟೈನ್ ಗೆ ವ್ಯವಸ್ಥೆ ಮಾಡಲಾಗಿದೆ.
ಇನ್ನು, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಈಗಾಗಲೇ ಮುಂಬೈನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಏಕದಿನ ನಾಯಕತ್ವದ ಜವಾಬ್ಧಾರಿಯಿಂದಲೂ ಮುಕ್ತರಾದ ಬಳಿಕ ಕೇವಲ ಟೆಸ್ಟ್ ತಂಡದ ನಾಯಕರಾಗಿ ಉಳಿದುಕೊಂಡಿರುವ ಕೊಹ್ಲಿ ಬ್ಯಾಟಿಂಗ್ ಆಫ್ರಿಕಾ ಪ್ರವಾಸದಲ್ಲಾದರೂ ಮರಳಿ ಲಯ ಕಂಡುಕೊಳ್ಳಬಹುದು ಎಂಬ ವಿಶ್ವಾಸ ಅಭಿಮಾನಿಗಳದ್ದು.