Select Your Language

Notifications

webdunia
webdunia
webdunia
webdunia

ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಪ್: ಪಿ.ವಿ. ಸಿಂಧುವಿನತ್ತ ಎಲ್ಲರ ಭರವಸೆ

ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಪ್: ಪಿ.ವಿ. ಸಿಂಧುವಿನತ್ತ ಎಲ್ಲರ ಭರವಸೆ
ನವದೆಹಲಿ , ಭಾನುವಾರ, 12 ಡಿಸೆಂಬರ್ 2021 (09:57 IST)
ನವದೆಹಲಿ: ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಪ್ ಗೆ ಇಂದಿನಿಂದ ಚಾಲನೆ ಸಿಗಲಿದ್ದು, ಭಾರತದ ತಾರೆ, ಹಾಲಿ ಚಾಂಪಿಯನ್ ಪಿ.ವಿ. ಸಿಂಧುವಿನ ಮೇಲೆ ಎಲ್ಲರ ಭರವಸೆಯಿದೆ.

ಸ್ಪೇನ್ ನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಭಾರತದ ಏಕೈಕ ಭರವಸೆ ಸಿಂಧು. ಇನ್ನೊಬ್ಬ ಹಿರಿಯ ತಾರೆ ಸೈನಾ ನೆಹ್ವಾಲ್ ಗಾಯದ ಕಾರಣದಿಂದ ಟೂರ್ನಿಯಿಂದ ಹೊರಬಂದಿದ್ದಾರೆ.

ಎರಡು ವರ್ಷಗಳ ಹಿಂದೆ ನಡೆದ ಕೂಟದಲ್ಲಿ ಪಿ.ವಿ. ಸಿಂಧು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿದ್ದರು. ಕೊರೋನಾ ಕಾರಣದಿಂದ ಕೆಲವು ಪ್ರಮುಖ ಆಟಗಾರರೇ ಟೂರ್ನಿಯಿಂದ ಹೊರನಡೆದಿದ್ದಾರೆ. ಹೀಗಾಗಿ ಮತ್ತೆ ಚಾಂಪಿಯನ್ ಆಗಲು ಸಿಂಧುವಿಗೆ ಉತ್ತಮ ಅವಕಾಶವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೆಸ್ಟ್ ಇಂಡೀಸ್ ಕ್ರಿಕೆಟಿಗರಿಗೆ ಕೊರೋನಾ ಹಾವಳಿ