Publish Date: Sun, 12 Dec 2021 (09:00 IST)
Updated Date: Sun, 12 Dec 2021 (09:02 IST)
ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ಮೊದಲ ಸರಣಿಯಲ್ಲೇ ಯಶಸ್ಸು ಕಂಡಿರುವ ರಾಹುಲ್ ದ್ರಾವಿಡ್ ಬಗ್ಗೆ ರೋಹಿತ್ ಶರ್ಮಾ ಇತ್ತೀಚೆಗಿನ ಸಂದರ್ಶನದಲ್ಲಿ ವಿನೂತನ ವಿಚಾರವೊಂದನ್ನು ಹೊರಗೆಡವಿದ್ದಾರೆ.
ಕೋಚ್ ಆದ ಬಳಿಕ ದ್ರಾವಿಡ್ ಪ್ರತಿಯೊಬ್ಬ ಆಟಗಾರನ ಬಳಿ ಖುದ್ದಾಗಿ ತೆರಳಿ ವೈಯಕ್ತಿಕವಾಗಿ ಮಾತನಾಡಿದ್ದರಂತೆ. ಹೀಗಂತ ರೋಹಿತ್ ಹೊಗಳಿದ್ದರು.
ದ್ರಾವಿಡ್ ಪ್ರತಿಯೊಬ್ಬ ಆಟಗಾರನ ಜೊತೆ ಸಂವಹನ ನಡೆಸುವ ರೀತಿಯಿಂದಲೇ ಎಲ್ಲರಿಗೂ ಇಷ್ಟವಾಗುತ್ತಾರೆ. ಎಲ್ಲರೂ ಹೇಳುವಂತೆ ಒಬ್ಬ ಹೊರ ಹೋಗುವ ಆಟಗಾರನಾಗಿದ್ದರೂ ಸರಿ, ಆತನ ಜೊತೆಗೆ ಸ್ಪಷ್ಟವಾಗಿ ಅದಕ್ಕೆ ಕಾರಣ ನೀಡುವ ಮೂಲಕ ಆತನಲ್ಲೂ ಆತ್ಮವಿಶ್ವಾಸ ತುಂಬುವುದು ದ್ರಾವಿಡ್ ಶೈಲಿ. ಇದನ್ನೇ ರೋಹಿತ್ ಕೂಡಾ ಹೇಳಿದ್ದಾರೆ. ನಾಯಕನಾದ ಬಳಿಕ ಪ್ರತಿಯೊಬ್ಬ ಬ್ಯಾಟರ್, ಬೌಲರ್ ಬಳಿ ಹೋಗಿ ದ್ರಾವಿಡ್ ಅವರಿಂದ ಏನು ನಿರೀಕ್ಷೆಗಳಿವೆ, ಅವರು ಏನು ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದರಂತೆ. ಇದರಿಂದಲೇ ತಂಡದಲ್ಲಿ ಅವರ ಕೋಚಿಂಗ್ ಶೈಲಿ ಬಗ್ಗೆ ಎಲ್ಲರಿಗೂ ಮೆಚ್ಚುಗೆ ಇದೆ ಎನ್ನಲಾಗಿದೆ.