Publish Date: Sun, 12 Dec 2021 (09:12 IST)
Updated Date: Sun, 12 Dec 2021 (09:12 IST)
ನವದೆಹಲಿ: ಪ್ರಧಾನಿ ಮೋದಿ ಟ್ವಿಟರ್ ಖಾತೆ ಇಂದು ಬೆಳ್ಳಂ ಬೆಳಿಗ್ಗೆ ಕೆಲವು ಕಾಲ ಹ್ಯಾಕ್ ಆಗಿತ್ತು. ಅದಾದ ಬಳಿಕ ತಕ್ಷಣವೇ ಅದನ್ನು ಸರಿಪಡಿಸಲಾಯಿತು.
ಪ್ರಧಾನಿ ಮೋದಿ ಟ್ವಿಟರ್ ಖಾತೆ ಹ್ಯಾಕ್ ಆದ ಕುರಿತು ಪ್ರಧಾನಿ ಕಾರ್ಯಾಲಯದ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಲಾಗಿತ್ತು. ತಕ್ಷಣವೇ ಟ್ವಿಟರ್ ಸಂಸ್ಥೆಯ ಗಮನಕ್ಕೆ ತಂದು ಸರಿಪಡಿಸಲಾಗಿದೆ ಎನ್ನಲಾಗಿದೆ.
ಇನ್ನು, ಈ ಖಾತೆಯಿಂದ ಯಾವುದೇ ತಪ್ಪಾದ ಟ್ವೀಟ್ ಗಳು ಬಂದಿದ್ದಲ್ಲಿ ಅದನ್ನು ಕಡೆಗಣಿಸುವಂತೆ ಪ್ರಧಾನಿ ಕಾರ್ಯಾಲಯ ಟ್ವೀಟ್ ಮೂಲಕ ಮನವಿ ಮಾಡಿತ್ತು.